ಹೈದರಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕ್ರೀಡೆಯಿಂದ ನಿವೃತ್ತಿಯ ಸುಳಿವು ನೀಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗೆ ಆಗಮಿಸಿದ ಸಾನಿಯಾ ಮಿರ್ಜಾ, ಇದು ತನ್ನ ಕೊನೆಯ ಋತು ಎಂದು ಹೇಳಿದ್ದು, ಈ ಮೂಲಕ 2022ರಲ್ಲಿ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬುಧವಾರ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತರ ಈ ಹೇಳಿಕೆ ಬಂದಿದೆ.
ಪಂದ್ಯದ ನಂತರ ಮಾತನಾಡಿ, ನಾನು ಉತ್ತಮವಾಗಿ ಆಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಈಗ ದೇಹವು ಅದನ್ನ ಆ ರೀತಿ ಬೆಂಬಲಿಸಲು ಸಾಧ್ಯವಿಲ್ಲ’ ಎಂದು ಮಿರ್ಜಾ ಹೇಳಿದರು. ಇದು ದೊಡ್ಡ ಹಿನ್ನಡೆಯಾಗಿದೆ. ಅಂದ ಹಾಗೆ, 2003ರಿಂದ ಅಂತಾರಾಷ್ಟ್ರೀಯ ಟೆನಿಸ್ ಆಡುತ್ತಿರುವ ಸಾನಿಯಾ ಮಿರ್ಜಾ ಸುಮಾರು ಎರಡು ದಶಕಗಳ ನಂತರ ಟೆನಿಸ್ ಅಂಗಳದಿಂದ ನಿರ್ಗಮಿಸಲಿದ್ದಾರೆ.