ಬ್ರಿಸ್ಬೇನ್: ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್(Sara Tendulkar) ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡದ್ದು ಇದಕ್ಕೆ ಕಾರಣ. ಸಾರಾ ಮತ್ತು ಶುಭಮಾನ್ ಗಿಲ್(shubman gill) ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಕಳೆದೊಂದು ವರ್ಷದಿಂದ ಗಾಸಿಪ್ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಾರಾ ಆಸೀಸ್‌ನಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರೇಮಿಗಳ ಕೌತುಕಕ್ಕೂ ಕಾರಣವಾಯಿತು.
ಬ್ರಿಸ್ಬೇನ್ನಲ್ಲಿ ಸಾರಾ ಕಾಣಿಸಿಕೊಂಡ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರಾ ಕ್ರಿಕೆಟ್ ಅಥವಾ ಕ್ರಿಕೆಟಿಗನ ಮೇಲಿನ ಪ್ರೀತಿಯಿಂದ ಪಂದ್ಯಕ್ಕೆ ಹಾಜರಾದರೇ ಎಂಬ ಪ್ರಶ್ನೆ ಕೇಳಿದ್ದಾರೆ. ಏಕದಿನ ವಿಶ್ವಕಪ್ ಪಂದ್ಯವನ್ನಾಡಲು ಟೀಮ್ ಇಂಡಿಯಾದ ಆಟಗಾರರು ಮುಂಬೈಗೆ ಬಂದಿದ್ದ ವೇಳೆ ಶುಭಮನ್ ಗಿಲ್ ಮತ್ತು ಸಾರಾ ಅವರು ರೆಸ್ಟೋರೆಂಟ್ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರೆಸ್ಟೋರೆಂಟ್‌ನಿಂದ ಸಾರಾ ಜತೆಗೆ ಬರುತ್ತಿರುವುದನ್ನು ಪಾಪರಾಜಿಗಳು ಕಂಡ ತಕ್ಷಣ ಶುಭಮನ್ ಗಿಲ್ ತನಗೇನು ತಿಳಿಯದವರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೊಂದು ಅಚಾನಕ್ ಮುಖಾಮುಖಿ ಎಂಬಂತೆ ತಮ್ಮ ಪಥ ಬದಲಿಸಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದಾಡಿದ್ದರು. ಗಿಲ್ ಅವರು ಪಂದ್ಯವಾಡುವ ವೇಳೆ ಹೆಚ್ಚಾಗಿ ಸಾರಾ ಕೂಡ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹಲವು ಬಾರಿ ಗಿಲ್ ಶತಕ ಬಾರಿಸಿದಾಗ ಸಾರಾ ಸಂಭ್ರಮಿಸಿದ ವಿಡಿಯೊ ಕೂಡ ವೈರಲ್ ಆಗಿತ್ತು. ಸಾರಾ ಜತೆ ಗಿಲ್ ಸಹೋದರಿ ಶಹನೀಲ್ ಕಾಣಿಸಿಕೊಂಡ ವಿಡಿಯೊ ಕೂಡ ವೈರಲ್ ಆಗಿತ್ತು.
ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ.