Saturday, 27th July 2024

ಭಾರತ – ಇಂಗ್ಲೆಂಡ್: ಎರಡನೇ ಏಕದಿನ ಪಂದ್ಯ ಇಂದು

ಲಾರ್ಡ್ಸ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ ಗುರುವಾರ ನಡೆಯಲಿದ್ದು ಲಂಡನ್​ನ ಲಾರ್ಡ್​​ ಮೈದಾನದಲ್ಲಿ ಆಯೋಜಿಸ ಲಾಗಿದೆ.

ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಜಯ ಸಾಧಿಸಿರುವ ರೋಹಿತ್ ಪಡೆ 1-0 ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್​ಗೆ ಮಾನ ಉಳಿಸಿಕೊಳ್ಳಲು ಇದು ಕೊನೆಯ ಅವಕಾಶ. ಬಾಕಿ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಸೋತರೆ ಜೋಸ್ ಬಟ್ಲರ್ ನಾಯಕತ್ವದ ಮೇಲೂ ಪರಿಣಾಮ ಬೀಳಲಿದೆ. ವಿರಾಟ್ ಕೊಹ್ಲಿ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

ಪ್ರಥಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಅಜೇಯ ಶತಕದ ಜೊತೆಯಾಟ ಆಡಿತ್ತು. ಹಿಟ್​​ಮ್ಯಾನ್ ಅರ್ಧಶತಕ ಸಿಡಿಸಿ ಮಿಂಚಿದ್ದರೆ, ಧವನ್ ಉತ್ತಮ ಸಾಥ್ ನೀಡಿದ್ದರು. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬಂದರೆ ಶ್ರೇಯಸ್ ಅಯ್ಯರ್ ಹೊರಗುಳಿಯಲಿದ್ದಾರೆ. ಕೊಹ್ಲಿ ಅಲಭ್ಯರಾದರೆ ಅಯ್ಯರ್​ಗೆ ಮತ್ತೊಂದು ಅವಕಾಶ ಸಿಗಲಿದೆ. ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನಕ್ಕೆ ಫಿಟ್ ಆಗಿದ್ದಾರೆ.

ವಿಕೆಟ್ ಕೀಪರ್  – ಬ್ಯಾಟರ್ ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಆಲ್ರೌಂಡರ್ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ವಹಿಸಿ ಕೊಳ್ಳುವುದು ಖಚಿತ.

ಬೌಲಿಂಗ್ ವಿಭಾಗದಲ್ಲಿ ಭಾರತ ಒಂದು ಬದಲಾವಣೆ ಮಾಡುವ ನಿರೀಕ್ಷೆಯಿದೆ. ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ಮಾರಕವಾಗಿದ್ದರು. ಇಂಗ್ಲೆಂಡ್ ಬ್ಯಾಟರ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ಗೆ ಅಟ್ಟಿದ್ದರು. ಹೀಗಾಗಿ ಆಡುವ ಬಳಗದಲ್ಲಿ ಇರಲಿದ್ದಾರೆ.

ಪ್ರಸಿದ್ಧ್ ಕೃಷ್ಣ ಜಾಗದಲ್ಲಿ ಶಾರ್ದೂಲ್ ಥಾಕೂರ್ ಅಥವಾ ಮೊಹಮ್ಮದ್ ಸಿರಾಜ್​​ ಆಡುವ ಸಾಧ್ಯತೆ ಇದೆ. ಲಾರ್ಡ್ಸ್‌ ಕ್ರೀಡಾಂಗಣದ ಪಿಚ್ ಮೊದಲಿನಿಂದಲೂ ಸ್ವಿಂಗ್ ಎಸೆತಗಳಿಗೆ ಹೆಚ್ಚು ನೆರವು ನೀಡುವ ಗುಣ ಹೊಂದಿದೆ. ಇಲ್ಲಿ 70 ಏಕದಿನ ಪಂದ್ಯಗಳು ನಡೆದಿವೆ.

ಆಂಗ್ಲರ ತಂಡದಲ್ಲಿ ಬೆನ್​ ಸ್ಟೋಕ್ಸ್​, ಜೋ ರೂಟ್​, ಬೈರ್​ಸ್ಟೋರಂತಹ ಬಲಿಷ್ಠ ಆಟಗಾರರಿದ್ದರು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟಿಂಗ್ ವೈಫಲ್ಯ ಸರಿಪಡಿಸಿಕೊಂಡರೆ, ಜಯಿಸುವ ಆಸೆ ಈಡೇರಬಹುದು. ಬೌಲಿಂಗ್​ನಲ್ಲಿ ಹ್ಯಾರಿ ಬ್ರೂಕ್ ಮತ್ತು ಪಿಲ್ ಸಲ್ಟ್ ಎರಡು ಆಯ್ಕೆಗಳಿದ್ದು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡರೆ ಅಚ್ಚರಿಪಡಬೇಕಿಲ್ಲ.

ಭಾರತ ಪ್ಲೇಯಿಂಗ್ XI:

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಮೊಹಮ್ಮದ್ ಶಮಿ, ಜಸ್​​ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್.

error: Content is protected !!