Friday, 25th October 2024

Virat Kohli : ಕೊಹ್ಲಿಯನ್ನು ಲಂಡನ್‌ಗೆ ಕಳುಹಿಸಿ; 1 ರನ್‌ಗೆ ಔಟಾಗಿದ್ದಕ್ಕೆ ಅಭಿಮಾನಿಗಳ ಬೇಸರ

Virat Kohli

ಪುಣೆ: ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಅವರ ವೈಫಲ್ಯ ಪ್ರದರ್ಶನ ಮುಂದುವರೆದಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಕೇವಲ 259 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಉತ್ತಮ ಆರಂಭ ಕಂಡಿತ್ತು.

ಪುಣೆಯಲ್ಲಿ ನಡೆಯುತ್ತಿರುವ ಪುಣೆ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಲ್ಲಿ ನಾಯಕ ರೋಹಿತ್ ಶರ್ಮಾ 9 ಎಸೆತಗಳಲ್ಲಿ ಡಕ್ ಔಟ್ ಆಗುವ ಮೂಲಕ ಭಾರತ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತ್ತು. ನಂತರ, ಶುಬ್ಮನ್ ಗಿಲ್ ವಿಶ್ವಾಸ ಮೂಡಿಸಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 72 ಎಸೆತಗಳಲ್ಲಿ 30 ರನ್ ಬಾರಿಸಿ ಅವರು ಪೆವಿಲಿಯನ್‌ಗೆ ಮರಳಿದರು. ಬೆಂಗಳೂರು ಟೆಸ್ಟ್‌ನಲ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಂತರ ಪುಣೆ ಟೆಸ್ಟ್‌ನಲ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಮೇಲೆ ಭರವಸೆ ಇತ್ತು.

ಭಾರತದ ಮಾಜಿ ನಾಯಕ ಮತ್ತೊಮ್ಮೆ ಟೀಮ್ ಇಂಡಿಯಾಕ್ಕೆ ಆಘಾತ ತಂದರು. ಜತೆಗೆ ಅಭಿಮಾನಿಗಳು ನಿರಾಶೆಗೊಂಡರು. ಏಕೆಂದರೆ ಅವರು ಕೇವಲ ಒಂದು ರನ್‌ಗೆ ಔಟಾದರು. ಈ ವೇಳೆ ಭಾರತ ತಂಡ 56 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

ವಿರಾಟ್ ಕೊಹ್ಲಿ ವೃತ್ತಿಜೀವನದ ಕೆಟ್ಟ ಶಾಟ್

ಎಸೆತ ಲೊ ಫುಲ್‌ಟಾಸ್ ಆಗಿತ್ತು. ನೇರವಾಗಿ ಮಧ್ಯದ ಸ್ಟಂಪ್‌ಗೆ ನುಗ್ಗಿತು. ವಿರಾಟ್ ಕೊಹ್ಲಿ ಲೈನ್‌ ಉದ್ದಕ್ಕೂ ಅಸಹಜ ಶಾಟ್ ಬಾರಿಸಲು ಯತ್ನಿಸಿದರು. ಚೆಂಡು ಅವನ ಬ್ಯಾಟ್ ಕೆಳಗಿನಿಂದ ಲೆಗ್‌ ಸ್ಟಂಪ್‌ಗೆ ಅಪ್ಪಳಿಸಿತು. ತಕ್ಷಣವೇ ಅವರು ನಿರಾಸೆಗೊಂಡರು.

ವಿರಾಟ್ ಕೊಹ್ಲಿ ಅವರ ವೈಫಲ್ಯದ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ಟೆಸ್ಟ್ ತಂಡದಿಂದ ಕೈಬಿಡುವಂತೆ ಟೀಮ್ ಮ್ಯಾನೇಜ್ಮೆಂಟ್ ಮತ್ತು ಆಯ್ಕೆದಾರರು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಲಂಡನ್‌ಗೆ ವಾಪಸ್‌ ಹೋಗುವುದೇ ಬೆಸ್ಟ್‌ ಎಂದರು. ಕೊಹ್ಲಿ ತಮ್ಮ ಎರಡನೇ ಮಗು ಅಕಾಯ್‌ ಹುಟ್ಟಿದಾಗಿನಿಂದ ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : Virat Kohli : 1 ರನ್‌ಗೆ ಕೊಹ್ಲಿ ಕ್ಲೀನ್ ಬೌಲ್ಡ್‌; ಆಘಾತಕ್ಕೊಳದ ಸ್ಟಾರ್ ಬ್ಯಾಟರ್‌; ಇಲ್ಲಿದೆ ವಿಡಿಯೊ

ಟೆಸ್ಟ್ ಸರಣಿಗಾಗಿ ಕೊಹ್ಲಿಯ ಅಭ್ಯಾಸವನ್ನು ಕೆಲವು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ಅವರು ಹೆಚ್ಚಿನ ಸಮಯವನ್ನು ತಂಡದಿಂದ ದೂರ ಕಳೆಯುತ್ತಾರೆ. ಅವರು ಇತ್ತೀಚೆಗೆ ಭಾರತೀಯ ತಂಡವನ್ನು ತೊರೆದು ತಮ್ಮ ಕುಟುಂಬದೊಂದಿಗೆ ಇರಲು ಮುಂಬೈಗೆ ಹೋಗಿದ್ದರು.

ಬಾಂಗ್ಲಾದೇಶ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ಇತ್ತೀಚಿನ ಸ್ಕೋರ್ 6, 17, 47 ಮತ್ತು 29* ಆಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 0 ಮತ್ತು 70 ರನ್ ಗಳಿಸಿದ್ದರು. ಪುಣೆಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ (30), ರಿಷಭ್ ಪಂತ್ (18) ಮತ್ತು ಸರ್ಫರಾಜ್ ಖಾನ್ (11) ಕೇವಲ 25 ರನ್ಗಳಿಗೆ ಕೊಹ್ಲಿ ವಿಕೆಟ್ ಭಾರತದ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಯಿತು. ಟೀಮ್ ಇಂಡಿಯಾ ಇನ್ನೂ 160 ರನ್ಗಳ ಹಿನ್ನಡೆಯಲ್ಲಿದೆ ಮತ್ತು ಈಗ ಅಂತರವನ್ನು ತುಂಬಲು ಕೇವಲ ನಾಲ್ಕು ವಿಕೆಟ್‌ಗಳನ್ನು ಹೊಂದಿದೆ.