Sunday, 15th December 2024

ಟಿ20 ವಿಶ್ವಕಪ್ ತಂಡಕ್ಕೆ ಅಕ್ಷರ್ ಬದಲು ಶಾರ್ದೂಲ್ ಸೇರ್ಪಡೆ

ದುಬೈ: ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ 2021 ಆರಂಭವಾಗಲಿದ್ದು, ಅಕ್ಷರ್ ಪಟೇಲ್ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನ 15 ಜನರ ತಂಡಕ್ಕೆ ಸೇರಿಸಲಾಗಿದೆ. ಬಿಸಿಸಿಐ ಈ ಮಾಹಿತಿಯನ್ನ ಪತ್ರಿಕಾ ಪ್ರಕಟಣೆ ಮೂಲಕ ನೀಡಿದೆ.

ತಂಡ ಇಂತಿದೆ. 

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಲೋಕೇಶ್ ರಾಹುಲ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ.

ಸ್ಟ್ಯಾಂಡ್ ಬೈ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹರ್.