Thursday, 12th December 2024

ಕ್ರಿಕೆಟಿಗ ಶಿಖರ್ ಧವನ್ ವಿಚ್ಛೇದನ

ನವದೆಹಲಿ: ಕ್ರಿಕೆಟಿಗ ಶಿಖರ್ ಧವನ್ ವಿಚ್ಛೇದನ ಪಡೆದುಕೊಂಡಿದ್ದಾರೆ. ದೆಹಲಿಯ ಪಟಿಯಾಲ ನ್ಯಾಯಾಲಯ ವಿಚ್ಛೇದನವನ್ನು ಅನುಮೋದಿಸಿದ್ದು, ಆಯೇಷಾ ತಮ್ಮ ಪತಿ ಶಿಖರ್ ಧವನ್ ಅವರಿಗೆ ಮಾನಸಿಕ ಹಿಂಸೆ ಕೊಟ್ಟಿದ್ದಾರೆ.

ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಶಿಖರ್ ಧವನ್ ಪತ್ನಿ ಆಯೇಷಾ ಮೇಲೆ ಆರೋಪ ಮಾಡಿದ್ದರು.

ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್ ಅವರ ಪತ್ನಿಯ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದು, ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಆಯೇಷಾ ವಿಫಲ ವಾಗಿದ್ದಾರೆ ಎಂದು ಹೇಳಿದ್ದಾರೆ.

ಆಯೇಷಾ ಆಸ್ಟ್ರೇಲಿಯಾದಲ್ಲಿ ವಾಸಿಸುವ ಮೂಲಕ ಮತ್ತು ವರ್ಷಗಳ ಕಾಲ ಮಗನನ್ನು ತಮ್ಮಿಂದ ದೂರ ವಿಟ್ಟು “ಲಾಂಗ್ ಡಿಸ್ಟೆನ್ಸ್ ಮ್ಯಾರೇಜ್” ಗೆ ಬಲವಂತಪಡಿಸಿದ್ದರಿಂದ ಶಿಖರ್ ಧವನ್ ಮಾನಸಿಕ ಹಿಂಸೆಗೆ ಒಳಗಾ ಗಿದ್ದರು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ 2012 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 10 ವರ್ಷದ ಮಗ ಇದ್ದಾನೆ. ಆಯೇಶಾ ಮತ್ತು ಮಗ ಜೊರಾವರ್ ಧವನ್ ಇಬ್ಬರೂ ಆಸ್ಟ್ರೇಲಿಯಾದ ಪ್ರಜೆಗಳಾಗಿದ್ದಾರೆ. ಶಿಖರ್ ಧವನ್ ಅವರಿಗೂ ಮುನ್ನವೇ ಆಯೇಶಾ ಅವರು ಇನ್ನೊಂದು ಮದುವೆ ಯಾಗಿದ್ದರು, ಮೊದಲ ಪತಿಯಿಂದ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.

ಶಿಖರ್ ಧವನ್ ಸಲ್ಲಿಸಿದ್ದ ಅರ್ಜಿಯಲ್ಲಿ, ಧವನ್ ಅವರು ತಮ್ಮ ವೃತ್ತಿಪರ ಕ್ರಿಕೆಟರ್ ಆಗಿದ್ದ ಕಾರಣದಿಂದ ಆಸ್ಟ್ರೇಲಿಯಾಕ್ಕೆ ಯಾವಾಗಲೂ ಭೇಟಿ ನೀಡಲು ಆಗದ ಕಾರಣ, ಅವರ ಜೊತೆ ಭಾರತದಲ್ಲೇ ನೆಲೆಸುವುದಾಗಿ ಮೊದಲು ಆಯೇಶಾ ಭರವಸೆ ನೀಡಿದ್ದರು. ಆದರೂ, ಮದುವೆಯ ನಂತರ ಅವರು ಭಾರತಕ್ಕೆ ಬರಲು ನಿರಾಕರಿಸಿದರು. ಭಾರತಕ್ಕೆ ಬಂದರೆ ತನ್ನ ಇಬ್ಬರು ಹೆಣ್ಣು ಮಕ್ಕಳ ಪಾಲನೆಯನ್ನು ಮಾಜಿ ಪತಿಗೆ ಬಿಟ್ಟುಕೊಡುವ ಕಾರಣದಿಂದ ಭಾರತಕ್ಕೆ ಬರಲ್ಲ ಎಂದು ಹೇಳಿದ್ದರು.