Sunday, 15th December 2024

ಇಂದು ಶಿವಮೊಗ್ಗ ಲಯನ್ಸ್ – ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿ

ಇಂದು ಮಹಾರಾಜ ಟ್ರೋಫಿಯ ಮೊದಲ ಪಂದ್ಯದಲ್ಲೇ ಶಿವಮೊಗ್ಗ ಲಯನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿಯಾಗುತ್ತಿದ್ದು, ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಶಿವಮೊಗ್ಗ ಲಯನ್ಸ್ ಮೊದಲ ಜಯದ ಹುಡುಕಾಟದಲ್ಲಿದೆ.

ಹಾರಾಜ ಟ್ರೋಫಿಯಾ ಎಲ್ಲಾ ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು, ನಿನ್ನೆ ನಡೆದ ಪಂದ್ಯಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಎದುರು ಹುಬ್ಬಳ್ಳಿ ಟೈಗರ್ಸ್ ತಂಡ ಐದು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದರೆ, ಮಂಗಳೂರು ಡ್ರ್ಯಾಗನ್ಸ್ ಜೊತೆ ಮೈಸೂರು ವಾರಿಯರ್ಸ್ ತಂಡ ಜಯಭೇರಿಯಾಗಿದೆ.

ಇನ್ನು ಮನಿಷ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಹ್ಯಾಟ್ರಿಕ್ ಜಯ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನ ಕ್ಕೇರಲಿದೆ. ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಶಿವಮೊಗ್ಗ ಲಯನ್ಸ್ ಗೆ ಅಭಿನವ್ ಮನೋಹರ್ ಒಬ್ಬರೇ ಬೆನ್ನೆಲುಬಾಗಿ ನಿಂತಿದ್ದಾರೆ. ಶಿವಮೊಗ್ಗ ಲಯನ್ಸ್ ತಂಡಕ್ಕೆ ಇಂದು ಗೆಲುವು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಪ್ಲೇ ಆಫ್ ಗೆ ಬರುವುದು ಕಷ್ಟಕರವಾಗಲಿದೆ.

ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ ಮೈಸ್ಟಿಕ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿಯಾಗಲಿವೆ.