ಮಂಗಳೂರು: ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಭಾರತ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ(Shivam Dube) ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಶಿವಂ ಅವರನ್ನು ದೇವರ ಶೇಷ ವಸ್ತ್ರ , ಪ್ರಸಾದ ನೀಡಿ ಗೌರವಿಸಲಾಯಿತು. ಇದಾ ಬಳಿಕ ದುಬೆ ಅವರು ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ನಗರದ ಬಳ್ಳಾಲ್ಬಾಗ್ನಲ್ಲಿ ನಡೆದ ಹುಲಿವೇಷ ಸ್ಪರ್ಧೆ ವೀಕ್ಷಿಸಿದರು. ಇವರ ಜತೆ ಬಾಲಿವುಡ್ ನಟ ಸಂಜಯ್ ದತ್ ಕೂಡ ಭಾಗಿಯಾಗಿದ್ದರು.
ಹುಲಿ ವೇಷ ಕುಣಿತವನ್ನು ವೀಕ್ಷಿಸಿದ ಬಳಿಕ ತಮಗಾದ ಅನುಭವವನ್ನು ಬಿಚ್ಚಿಟ್ಟ ದುಬೆ, ʼದೇವಸ್ಥಾನದಲ್ಲಿರುವಾಗ ಮನಸ್ಸಿನಲ್ಲಿ ಎಂತಹ ಸಂಚಲನ ಸೃಷ್ಟಿಯಾಗುತ್ತದೆಯೋ, ಅಂತಹದ್ದೇ ಅನುಭವ ಹುಲಿ ವೇಷ ಕುಣಿತವನ್ನು ನೋಡಿದಾಗಲೂ ಉಂಟಾಯಿತು ಎಂದರು. ಶನಿವಾರ ಹಮ್ಮಿಕೊಂಡಿದ್ದ ಪಿಲಿ ನಲಿಕೆ ಸ್ಪರ್ಧೆಯ ಒಂಬತ್ತನೇ ಆವೃತ್ತಿಯಲ್ಲಿ ಅತಿಥಿಯಾಗಿ ಭಾಗವಹಿಸಿದ ಅವರು ಕೆಲ ಹೊತ್ತು ಹುಲಿ ಕುಣಿತವನ್ನು ನೋಡಿ ನಿಬ್ಬೆರಗಾದರು. ಅಚ್ಚರಿ ಎಂದರೆ ದುಬೆ ನಮಸ್ಕಾರ ಕುಡ್ಲ.. ಎಂಚ ಉಲ್ಲರ್’ ಎಂದು ತುಳು ಮಾತನಾಡಿ ಎಲ್ಲರ ಮಗನ ಸೆಳೆದರು.
ಇದನ್ನೂ ಓದಿ IND vs BAN : ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ಭಾರತದ 3-0 ಕ್ಲೀನ್ ಸ್ವೀಪ್ ಸಾಧನೆ
ಇಂದು ಭಾರತ-ಆಸೀಸ್ ಹೈವೋಲ್ಟೇಜ್ ಪಂದ್ಯ
ದುಬೈ: ಮಹಿಳಾ ಟಿ20 ವಿಶ್ವಕಪ್ನಲ್ಲಿ(ICC Womens T20 World Cup) ಇಂದು ಭಾರತ ನಿರ್ಣಾಯಕ ಪಂದ್ಯ ಆಡಲು ಸಜ್ಜಾಗಿದೆ. ಎದುರಾಳಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ(INDW vs AUSW). ಎ ವಿಭಾಗದ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯವನ್ನು ಉತ್ತಮ ರನ್ರೇಟ್ನಿಂದ ಗೆದ್ದರೆ ಮಾತ್ರ ಸೆಮಿಫೈನಲ್ ಸ್ಥಾನಕ್ಕೆ ಸನಿಹವಾಗಲಿದೆ. ಆಸೀಸ್ ನಾಯಕಿ ನಾಯಕಿ ಅಲಿಸ್ಸಾ ಹೀಲಿ ಬಲಪಾದ ಗಾಯಕ್ಕೆ ತುತ್ತಾಗಿದ್ದರೆ, ವೇಗಿ ವ್ಲಾಮಿಂಕ್ ಭುಜದ ಮೂಳೆಯ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಇಬ್ಬರೂ ಇಂದಿನ ಪಂದ್ಯ ಆಡುವುದು ಅನುಮಾನ. ಕೌರ್ ಪಡೆ ಇದರ ಸಂಪೂರ್ಣ ಲಾಭವೆತ್ತಬೇಕು.
ಸಂಭಾವ್ಯ ತಂಡಗಳು
ಭಾರತ: ಶಫಾಲಿ ವರ್ಮಾ, ಸ್ಮತಿ ಮಂಧಾನ, ಹರ್ಮನ್ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ದೀಪ್ತಿ ಶರ್ಮಾ, ಸಜನಾ, ಅರುಂಧತಿ ರೆಡ್ಡಿ , ಶ್ರೇಯಾಂಕಾ ಪಾಟೀಲ್, ಆಶಾ, ರೇಣುಕಾ ಸಿಂಗ್.
ಆಸ್ಟ್ರೇಲಿಯಾ: ಬೆಥ್ ಮೂನಿ, ಅಲಿಸ್ಸಾ ಹೀಲಿ, ಎಲ್ಲಿಸ್ ಪೆರ್ರಿ, ಆಶ್ಲಿ ಗಾಡ್ನರ್, ಲಿಚ್ಫೀಲ್ಡ್, ಟಹ್ಲಿಯಾ, ವೇರ್ಹ್ಯಾಮ್, ಸದರ್ಲೆಂಡ್, ಮೊಲಿನೆಕ್ಸ್, ಶಟ್, ವ್ಲಾಮಿಂಕ್.