Sunday, 15th December 2024

ಶೂಟಿಂಗ್: ಮನು, ರಹಿಗೆ ನಿರಾಸೆ

ಪುಟಿಯನ್(ಚೀನಾ):
ಇಲ್ಲಿ ನಡೆಯುತ್ತಿಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ. ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್ ವಿಫಲರಾಗಿದ್ದಾಾರೆ. ಕಾಮನ್‌ವೆಲ್‌ತ್‌ ಚಿನ್ನದ ಪದಕ ವಿಜೇತೆ ಮನು ಭಾಕರ್ ಅವರು 292 ಹಾಗೂ ಇದರ ಹಿಂದೆ 291 ಅಂಕಗಳೊಂದಿಗೆ ಒಟ್ಟಾಾರೆ 583 ಅಂಕಗಳನ್ನು ಕ್ವಾಾರ್ಟರ್ ಫೈನಲ್‌ಸ್‌‌ನಲ್ಲಿ ಗಳಿಸಿದರು. ಆದರೆ, ಪ್ರಶಸ್ತಿಿ ಸುತ್ತಿಿಗೆ ಪ್ರವೇಶ ಮಾಡುವಲ್ಲಿ ವಿಫಲರಾದರು. ಇನ್ನಿಿತರೆ ಶೂಟರ್ ಗಳಾದ ಜರ್ಮನಿಯ ವೆನ್ನೆೆಕ್ಯಾಾಂಪ್ ಹಾಗೂ ಆಸ್ಟ್ರೇಲಿಯಾದ ಎಲೀನಾ ಗ್ಯಾಾಲಿಬೋವಿಚ್ ಅವರು ಕೂಡ 583 ಅಂಕಗಳನ್ನು ಪಡೆದರು. ಜರ್ಮನ್ ಶೂಟರ್ 10 ಇನ್ನರ್ ಅಂಕ ಪಡೆದರು. ಮನು ಹಾಗೂ ಗ್ಯಾಾಲಿಬೋವಿಚ್ ಅವರು 17 ಇನ್ನರ್ ಹಾಗೂ 10 ಹಾಗೂ ವೆನ್ನೆೆಕ್ಯಾಾಂಪ್ 23 ಶಾಟ್‌ಗಳಲ್ಲ ಗುರಿ ಮುಟ್ಟಿಿದರು. ಮತ್ತೊೊರ್ವ ಶೂಟರ್ ರಹಿ ಸರ್ನೋಬತ್ ಅವರು ನೀರಸ ಪ್ರದರ್ಶನ ತೋರಿದರು. ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಭಾರತದ ಶೂಟರ್ 569 ಅಂಕಗಳೊಂದಿಗೆ ಪಟ್ಟಿಿಯಲ್ಲಿ ಕೊನೆಯ ಸ್ಥಾಾನ ಪಡೆದರು.
==