Sunday, 24th November 2024

Shreyas Iyer: ಕೆಕೆಆರ್‌ನಿಂದ ಶ್ರೇಯಸ್‌ ಅಯ್ಯರ್‌ ಕೈ ಬಿಡಲು ಅಸಲಿ ಕಾರಣ ಇದು!

ಮುಂಬಯಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ(ipl auction 2025) ಹಾಲಿ ಚಾಂಪಿಯನ್‌ ಕೆಕೆಆರ್‌(KKR) ತಂಡದ ನಾಯಕನಾಗಿದ್ದ ಶ್ರೇಯಸ್‌ ಅಯ್ಯರ್‌(Shreyas Iyer), ವಿಕೆಟ್‌ಕೀಪರ್ ರಿಷಭ್ ಪಂತ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಖರೀದಿಸಲು ಅಪಾರ ಪೈಪೋಟಿ ಏರ್ಪಡುವ ನಿರೀಕ್ಷೆ ಗರಿಗೆದರಿದೆ. ಕೆಕೆಆರ್‌ ತಂಡದಿಂದ ಅಯ್ಯರ್‌ ಹೊರಬರಲು ಕಾರಣ ಏನೆಂಬ ಸತ್ಯ ಈಗ ಬಯಲಾಗಿದೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕೆಕೆಆರ್‌ ತಂಡದ ಸಿಇಒ ವೆಂಕಿ ಮೈಸೂರು (Venky Mysore) ಮಾಹಿತಿ ನೀಡಿದ್ದಾರೆ. ʼನಮ್ಮ ರಿಟೇನ್​ ಪಟ್ಟಿಯ ಮೊದಲ ಆಯ್ಕೆಯಾಗಿ ಶ್ರೇಯಸ್ ಅಯ್ಯರ್ ಹೆಸರಿತ್ತು. ಅವರು ನಮ್ಮ ತಂಡದ ನಾಯಕ ಮತ್ತು ನಾವು ನಾಯಕನ ಸುತ್ತ ಇಡೀ ತಂಡವನ್ನು ಕಟ್ಟಬೇಕಿತ್ತು. ಆದರೆ, ರಿಟೇನ್​ (Retain) ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಿಗೆ ಅಗತ್ಯವಿದ್ದು, ಶ್ರೇಯಸ್ ಅಯ್ಯರ್ (Shreyas Iyer) ಕಡೆಯಿಂದ ಆ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಫ್ರಾಂಚೈಸ್​ನಿಂದಲೂ ಏನನ್ನು ಮಾಡಲು ಸಾಧ್ಯವಾಗಲಿಲ್ಲʼ ಎಂದಿದ್ದಾರೆ.

30 ಕೋಟಿ ಬೇಡಿಕೆ

ತಂಡದ ಕೆಲ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಶ್ರೇಯಸ್‌ ಅಯ್ಯರ್‌ ಕೆಕೆಆರ್‌ನಲ್ಲಿ ಉಳಿಯಲು ಮ್ಯಾನೇಜ್‌ಮೆಂಟ್‌ ಬಳಿ 30 ಕೋಟಿ ರೂ. ಕೇಳಿದ್ದರು ತಿಳಿದುಬಂದಿದೆ. ಇಷ್ಟು ದೊಡ್ಡದ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಕಾರಣ ಅವರನ್ನು ತಂಡದಿಂದ ಕೈ ಬಿಡಲಾಯಿತು ಎನ್ನಲಾಗಿದೆ. ಅಯ್ಯರ್‌ ಕಳೆದ ಆವೃತ್ತಿಯಲ್ಲಿ ನಾಯಕನಾಗಿ ಕಪ್‌ ಗೆದ್ದರೂ ಕೂಡ ತಂಡಕ್ಕೆ ಅವರ ಕೊಡುಗೆ ಶೂನ್ಯವಾಗಿತ್ತು. ಎಲ್ಲ ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್‌ ನಡೆಸಿದ್ದರು. 2022ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್​ರೈಡರ್ಸ್​ (KKR) ಪಾಲಾಗಿದ್ದ ಶ್ರೇಯಸ್​ ಅಯ್ಯರ್​, 2023ರಲ್ಲಿ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ. 2024ರಲ್ಲಿ ನಾಯಕನಾಗಿ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ IPL 2025: ಆರ್‌ಸಿಬಿಯಿಂದ ಸಿರಾಜ್‌ ಕೈಬಿಟ್ಟ ಕಾರಣ ತಿಳಿಸಿದ ನಿರ್ದೇಶಕ ಬೋಬಟ್

ಸಮತೋಲನದ ಬೌಲಿಂಗ್​ ವಿಭಾಗವನ್ನು ಕಟ್ಟುವ ಸಲುವಾಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ಆರ್‌ಸಿಬಿಯಿಂದ ಕೈಬಿಡಲಾಯಿತು ಎಂದು ಆರ್‌ಸಿಬಿ ತಂಡದ ಕ್ರಿಕೆಟ್​ ನಿರ್ದೇಶಕ ಮೋ ಬೋಬಟ್(Mo Babat)​ ಸ್ಪಷ್ಟನೆ ನೀಡಿದ್ದಾರೆ. ʼತಂಡಕ್ಕೆ ಸಿರಾಜ್​ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಲವು ಆಯ್ಕೆಗಳನ್ನು ತಲೆಯಲ್ಲಿಟ್ಟುಕೊಂಡು ಹರಾಜಿಗೆ ತೆರಳಲು ನಾವು ಬಯಸಿದ್ದೇವೆ. ಹೀಗಾಗಿ ಅವರನ್ನು ಕೈಬಿಡಲಾಯಿತುʼ ಎಂದು ಹೇಳಿದರು. 2018ರಿಂದ ಆರ್​ಸಿಬಿ ತಂಡದ ಬೌಲಿಂಗ್​ ವಿಭಾಗದಲ್ಲಿರುವ ವೇಗಿ ಮೊಹಮದ್​ ಸಿರಾಜ್​ 87 ಪಂದ್ಯಗಳಲ್ಲಿ 83 ವಿಕೆಟ್​ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 15 ವಿಕೆಟ್​ ಉರುಳಿಸಿದ್ದರು. ಇದರ ನಡುವೆಯೂ ಅವರನ್ನು ಈ ಬಾರಿ ರಿಟೇನ್​ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟುಕೊಡಲಾಗಿದೆ.