Sunday, 15th December 2024

Shubman Gill: ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಹಿಂದೆ ಬಿದ್ದರೇ ಶುಭಮನ್‌ ಗಿಲ್‌?

Shubman Gill

ಮುಂಬಯಿ: ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್(Shubman Gill)​ ​ ಮತ್ತು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್(Sara Tendulkar) ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಇದೀಗ ಗಿಲ್‌ ಹೆಸರು ಬಾಲಿವುಡ್‌ ನಟಿ ಅನನ್ಯಾ ಪಾಂಡೆ(Ananya Panday) ಜತೆ ಕೇಳಿ ಬಂದಿದೆ. ಹೌದು, ಇವರಿಬ್ಬರು ಜತೆಯಾಗಿ ಕಾಣಿಸಿಕೊಂಡ ಫೋಟೊವೊಂದು ವೈರಲ್‌ ಆಗಿದೆ. ಅಸಲಿಗೆ ಇವರಿಬ್ಬರು ಜಾಹೀರಾತೊಂದರ ಭಾಗವಾಗಿ ತೆಗೆಸಿಕೊಂಡ ಫೋಟೊ ಇದಾಗಿದೆ. ಆದರೆ, ನೆಟ್ಟಿಗರು ಈ ಫೋಟೋದ ಹಿಂದಿರುವ ಅಸಲಿ ಕಾರಣವನ್ನು ತಿಳಿಯದೆ ಗಿಲ್‌ ಸಾರಾಗೆ ಕೈ ಕೊಟ್ಟು ಅನನ್ಯಾ ಪಾಂಡೆ ಹಿಂದೆ ಬಿದ್ದಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.

https://x.com/mufaddal_vohra/status/1831161972785602780

ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. ಏಕದಿನ ವಿಶ್ವಕಪ್​ ಪಂದ್ಯವನ್ನಾಡಲು ಟೀಮ್​ ಇಂಡಿಯಾದ ಆಟಗಾರರು ಮುಂಬೈಗೆ ಬಂದಿದ್ದ ವೇಳೆ ಶುಭಮನ್​ ಗಿಲ್​ ಮತ್ತು ಸಾರಾ ಅವರು ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೆಸ್ಟೋರೆಂಟ್‌ನಿಂದ ಸಾರಾ ಜತೆಗೆ ಬರುತ್ತಿರುವುದನ್ನು ಪಾಪರಾಜಿಗಳು ಕಂಡ ತಕ್ಷಣ ಶುಭಮನ್​ ಗಿಲ್​ ತನಗೇನು ತಿಳಿಯದವರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೊಂದು ಅಚಾನಕ್ ಮುಖಾಮುಖಿ ಎಂಬಂತೆ ತಮ್ಮ ಪಥ ಬದಲಿಸಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದಾಡಿದ್ದರು. ಗಿಲ್‌ ಅವರು ಪಂದ್ಯವಾಡುವ ವೇಳೆ ಹೆಚ್ಚಾಗಿ ಸಾರಾ ಕೂಡ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹಲವು ಬಾರಿ ಗಿಲ್‌ ಶತಕ ಬಾರಿಸಿದಾಗ ಸಾರಾ ಸಂಭ್ರಮಿಸಿದ ವಿಡಿಯೊ ಕೂಡ ವೈರಲ್‌ ಆಗಿತ್ತು.

ಕೆಲ ದಿನಗಳ ಹಿಂದೆ ಅನನ್ಯಾ ಪಾಂಡೆ ಕ್ರಿಕೆಟಿಗ ದಾರ್ದಿಕ್‌ ಪಾಂಡ್ಯ ಜತೆ ಡೇಟಿಂಗ್‌, ಚಾಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಇದಕ್ಕೆ ಕಾರಣ ಇವರಿಬ್ಬರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮದಲ್ಲಿ ಜತೆಯಾಗಿ ನೃತ್ಯಮಾಡಿದ್ದು. ಸದ್ಯ ಗಿಲ್‌ ನಾಳೆಯಿಂದ ಆರಂಭಗೊಳ್ಳಲಿರುವ ದೇಶೀಯ ಟೂರ್ನಿಯಾದ ದುಲೀಪ್‌ ಟ್ರೋಫಿಯಲ್ಲಿ ಭಾರತ ‘ಎʼ ತಂಡದ ಪರ ಆಡಲಿದ್ದಾರೆ. ತಂಡದ ನಾಯಕನೂ ಆಗಿದ್ದಾರೆ.