ಮೆಲ್ಬರ್ನ್: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಭಾರತದ ಜಸ್ ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಆಘಾತ ನೀಡಿದ್ದಾರೆ.
ಟೆಸ್ಟ್ ಪಾದಾರ್ಪಣೆ ಮಾಡಿರುವ ಸಿರಾಜ್ ಮಾರ್ಕಸ್ ಲಾಬುಶ್ಗನನೆ ಹಾಗೂ ಕ್ಯಾಮರೂನ್ ಗ್ರೀನ್ ಅವರ ವಿಕೆಟ್ ಪಡೆದು ಮೊದಲ ಪಂದ್ಯದಲ್ಲೇ ಯಶ ಕಂಡರು.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸಿಸ್ ನಾಯಕ ಆಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಆಸಿಸ್ ತಂಡಕ್ಕೆ ಭಾರತದ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಶೂನ್ಯಕ್ಕೆ ಜೋ ಬರ್ನ್ಸ್ ಅವರನ್ನು ಬೂಮ್ರಾ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು. ನಂತರ ದಾಳಿಗೆ ಇಳಿದ ಅಶ್ವಿನ್ ಚುರುಕಾಗಿ 2 ವಿಕೆಟ್ ಪಡೆ ದರು. ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ವಿಕೆಟ್ ಪಡೆದರು. ಮಿಂಚಿನ ಆಟವಾಡಿದ ವೇಡ್ 30 ರನ್ ಗಳಿಸಿ ಔಟಾದರು. ಸ್ಮಿತ್ ಅವರನ್ನು ಅಶ್ವಿನ್ ಶೂನ್ಯಕ್ಕೆ ಔಟ್ ಮಾಡಿದರು. ಬೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಬುಮ್ರಾ ಆಘಾತ ನೀಡಿದರು.
ಇತ್ತೀಚಿನ ವರದಿ ಪ್ರಕಾರ, ಆಸೀಸ್ ಅಗ್ರ ಕ್ರಮಾಂಕ ಸಹಿತ 7 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ, ಕುಂಟುತ್ತಿತ್ತು. ನಾಯಕ ಟಿಮ್ ಪೇನ್ ಕೂಡ ಔಟಾಗಿದ್ದಾರೆ.