Thursday, 12th December 2024

ಕ್ರೀಸ್‌ನಲ್ಲಿ ಗಾರ್ಡ್‌ ಮಾರ್ಕ್‌ ಅಳಿಸಿದ ಸ್ಮಿತ್‌: ವ್ಯಾಪಕ ಆಕ್ರೋಶ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಡುವಿನ ಮೂರನೆ ಟೆಸ್ಟ್‌ ಪಂದ್ಯಾಟವು ರೋಚಕ ಡ್ರಾ ಕಂಡಿದೆ.

ಪಂದ್ಯಾಟದಾದ್ಯಂತ ಗಾಯದ ಪ್ರಕರಣಗಳು, ಸ್ಲೆಡ್ಜಿಂಗ್‌ ಹಾಗೂ ಜನಾಂಗೀಯ ನಿಂದನೆಯ ಪ್ರಕರಣಗಳು ನಡೆದಿತ್ತು. ಭಾರತೀಯ ತಂಡದ ವಿಕೆಟ್‌ ಕೀಪರ್‌, ಬ್ಯಾಟ್ಸ್‌ ಮನ್‌ ರಿಶಭ್‌ ಪಂತ್‌ ಉತ್ತಮ ಪ್ರದರ್ಶನ ತೋರ್ಪಡಿಸದಿದ್ದರೂ ಕೊನೆಯ ಪಂದ್ಯಾಟದಲ್ಲಿ 97 ರನ್‌ ದಾಖಲಿಸಿದ್ದರು.

ಮೂರನೇ ಟೆಸ್ಟ್‌ ಪಂದ್ಯಾಟದಲ್ಲಿ ರಿಶಭ್‌ ಪಂತ್‌ ರವರು ಕ್ರೀಸ್‌ ನಲ್ಲಿರುವಾಗಲೇ ಅವರು ಗುರುತು ಮಾಡಿಟ್ಟಿದ್ದ ಗಾರ್ಡ್‌ ಮಾರ್ಕ್‌ ಅನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಟೀವ್‌ ಸ್ಮಿತ್‌ ರವರು ಅಳಿಸಿ ಹಾಕಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪಂತ್‌ 64 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಡ್ರಿಂಕ್ಸ್‌ ಬ್ರೇಕ್‌ ಅವಧಿಯಲ್ಲಿ ಸ್ಟೀವ್‌ ಸ್ಮಿತ್‌, ಗಾರ್ಡ್‌ ಮಾರ್ಕ್‌ ಗಳನ್ನು ಅಳಿಸುವ ಪ್ರಯತ್ನ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೊಳ ಗಾಗಿದ್ದ ಘಟನೆಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಮೋಸಗಾರನಾದರೆ, ಯಾವತ್ತೂ ಮೋಸಗಾರನಾಗಿಯೇ ಇರುತ್ತಾನೆ ಎಂದೂ ಟೀಕಿಸಿದ್ದಾರೆ.