Sunday, 15th December 2024

ಸ್ಮಿತ್‌ ಶತಕದಾಟ , ಮುನ್ನೂರು ರನ್‌ ಗಡಿ ದಾಟಿದ ಆಸೀಸ್

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆಸೀಸ್‌ ತಂಡ ಇತ್ತೀಚಿನ ವರದಿ ಪ್ರಕಾರ ಏಳು ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿಸಿದೆ. ಮಾಜಿ ನಾಯಕ ಸ್ಟೀವನ್ ಸ್ಮಿತ್ ಶತಕ ಗಳಿಸಿ, ತಮ್ಮ ಇನ್ನಿಂಗ್ಸಿಗೆ ಮೆರುಗು ತಂದರು.

ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಕಾಂಗರೂಗಳಿಗೆ ಸ್ಮಿತ್ ಮತ್ತು ಲಬುಶೇನ್ ಆಧಾರ ವಾದರು. ಲಬುಶೇನ್ 91 ರನ್ ಗೆ ಔಟಾಗಿ ಶತಕ ವಂಚಿತರಾದರು. ನಂತರ ಬಂದ ಮ್ಯಾಥ್ಯೂ ವೇಡ್ ಮತ್ತು ಕ್ಯಾಮರೂನ್ ಗ್ರೀನ್, ಟಿಮ್ ಪೇನ್ ಬೇಗನೇ ವಿಕೆಟ್ ಒಪ್ಪಿಸಿದರು.

ಭಾರತದ ಪರ ಜಡೇಜಾ ಮೂರು, ಬುಮ್ರಾ ಎರಡು ವಿಕೆಟ್ ಕಿತ್ತರೆ, ಸಿರಾಜ್ ಮತ್ತು ಸೈನಿ ತಲಾ ಒಂದು ವಿಕೆಟ್ ಕಬಳಿಸಿದರು.