Friday, 13th December 2024

ದಕ್ಷಿಣ ಆಫ್ರಿಕಾಗೆ ಸತತ ನಾಲ್ಕನೇ ಗೆಲುವು

ಹ್ಯಾಮಿಲ್ಟನ್‌: ಮಹಿಳಾ ವಿಶ್ವಕಪ್‌ ನಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ.

ಗುರುವಾರದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿದೆ. ನಾಯಕಿ ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್ ಅವರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ ನ್ಯೂಜಿ ಲೆಂಡ್ ಕೇವಲ 228 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಮೂರು ಎಸೆತ ಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಸಾಧಿಸಿತು. ಆಫ್ರಿಕಾದ ಬೌಲರ್ ಮರಿಜಾನ್ ಕ್ಯಾಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ದಕ್ಷಿಣ ಆಫ್ರಿಕಾ ಈ ಹಿಂದೆ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿ ಸಿತ್ತು. ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾಕ್ಕಿಂತ ಹಿಂದಿದ್ದಾರೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಮೆಲಿಯಾ ಕರ್ ಮತ್ತು ಸೋಫಿ ಡಿವೈನ್ ಇನ್ನಿಂಗ್ಸ್ ಕೈಗೆತ್ತಿಕೊಂಡು 76 ರನ್‌ಗಳ ಜೊತೆಯಾಟ ಹಂಚಿಕೊಂಡರು.

ಬಳಿಕ ಸದರ್ವೈತ್ (1) ಮತ್ತು ಮ್ಯಾಡಿ ಗ್ರೀನ್ (30) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 93 ರನ್ ಗಳಿಸಿ ಡಿವೈನ್ ಬೌಲ್ಡ್ ಆದರು. ಹ್ಯಾಲಿಡೆ (24), ಕೇಟೀ ಮಾರ್ಟಿನ್ (9) ಮತ್ತು ಫ್ರಾನ್ಸಿಸ್ ಮ್ಯಾಕಿ (7) ಎರಡಂಕಿ ಮೊತ್ತವನ್ನು ಮುಟ್ಟಲಿಲ್ಲ. ಆದರೆ ಹನಾಹ್ ರೋವ್ ಮತ್ತು ತಹುಹು ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.