ಚೆನ್ನೈ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು.
ಪಾಕಿಸ್ತಾನ ಬ್ಯಾಟಿಂಗ್ ಇನ್ನೂ ೧೪ ಎಸೆತ ಬಾಕಿ ಇರುವಾಗಲೇ ಅಂತ್ಯಗೊಂಡಿತು. ಇವರ ಇನ್ನಿಂಗ್ಸ್ ನಲ್ಲಿಎರಡು ಅರ್ಧಶತಕಗಳು ಮೂಡಿಬಂದವು. ನಾಯಕ ಬಾಬರ್ ಅಜಂ ಹಾಗೂ ಶೌದ್ ಶಕೀಲ್ ಅರ್ಧಶತಕಗಳ ರೂವಾರಿಗಳು. ಇವರನ್ನು ಹೊರತುಪಡಿಸಿ, ಮೊಹಮ್ಮದ್ ರಿಜ್ವಾನ್, ಶದಾಬ್ ಖಾನ್ ತಲಾ 31 ಹಾಗೂ 43 ತಂಡದ ಮೊತ್ತ ಏರಲು ಕಾರಣರಾದರು. ಆರಂಭದಲ್ಲಿ ಪಾಕಿಸ್ತಾನ ಇನ್ನಿಂಗ್ಸನ್ನು ಕಾಡಿದ್ದು, ವೇಗಿ ಜಾನ್ಸನ್. ಇವರು ಮೂರು ವಿಕೆಟ್ ಕಿತ್ತರೆ, ಚೈನಾಮೆನ್ ಬೌಲರ್ ಶಮ್ಸಿ ನಾಲ್ಕು ವಿಕೆಟ್ ಕಿತ್ತು, ಪಾಕಿಸ್ತಾನದ ಇನ್ನಿಂಗ್ಸ್ ಕೂಡಲೇ ಮಂಗಳ ಹಾಡಿದರು.
ಮತ್ತೊಂದೆಡೆ ಕ್ರಿಕೆಟ್ ವಿಶ್ವ ಸಮರದಲ್ಲಿ ಭಾರತದ ನಂತರ ಎರಡನೇ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಹರಿಣ ಪಡೆ ಅದ್ಭುತ ಫಾರ್ಮ್ನೊಂದಿಗೆ ಮುನ್ನುಗ್ಗುತ್ತಿದೆ.
ವಿಶ್ವಕಪ್ನಲ್ಲಿ ಉಭಯ ತಂಡಗಳು 5 ಪಂದ್ಯಗಳನ್ನು ಆಡಿವೆ. ಇದರಲ್ಲಿ ಹರಿಣ ಪಡೆ 3ರಲ್ಲಿ ಗೆಲುವು ದಾಖಲಿಸಿದರೆ, ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಸೌದ್ ಶಕೀಲ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರೌಫ್.
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಲುಂಗಿ ಎನ್ಗಿಡಿ.