Thursday, 12th December 2024

ಎರಡನೇ ಟೆಸ್ಟ್ʼಗೆ ವೇಗಿ ಶಾರ್ದೂಲ್ ಠಾಕೂರ್ ಅಲಭ್ಯ

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ʼನ ಮುನ್ನಾ ದಿನದಂದು ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಹ್ಯಾಮ್ ಸ್ಟ್ರಿಂಗ್ ಗಾಯದಿಂದ ಲಾರ್ಡ್ಸ್ ಟೆಸ್ಟ್ʼನಿಂದ ಹೊರಗುಳಿದಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.

ನಾಟಿಂಗ್ ಹ್ಯಾಮ್ʼನಲ್ಲಿ ನಡೆದ ಮೊದಲ ಟೆಸ್ಟ್ʼನಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಸೇರಿದಂತೆ ನಾಲ್ಕು ವಿಕೆಟ್ʼಗಳನ್ನ ಪಡೆದ ಶಾರ್ದೂಲ್ ಅವರ ಎಡ ಹ್ಯಾಮ್ ಸ್ಟ್ರಿಂಗ್ʼಗೆ ಗಾಯವಾಗಿದೆ.

ಮುಂಬೈ ಕ್ರಿಕೆಟಿಗ ಮೂರನೇ ಟೆಸ್ಟ್ʼಗೆ ಲಭ್ಯವಾಗುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯವು ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಗೊಂಡಿತ್ತು. ಈ ಪಂದ್ಯಕ್ಕೆ ಭಾರತ ನಾಲ್ವರು ವೇಗಿಗಳನ್ನು ಆಡಿಸಿತ್ತು.