Usain Bolt: ಸೆಪ್ಟಂಬರ್‌ನಲ್ಲಿ ಭಾರತಕ್ಕೆ ಬರಲಿದ್ದಾರೆ ಉಸೇನ್ ಬೋಲ್ಟ್
Usain Bolt visit India: 2014ರಲ್ಲಿ ಬೆಂಗಳೂರಿಗೆ ಬಂದಿದ್ದು ಅವರ ಭಾರತದ ಮೊದಲ ಪ್ರವಾಸವಾಗಿತ್ತು. ಪೂಮಾ ಕಂಪೆನಿ ಮತ್ತು ಇ–ಕಾಮರ್ಸ್ ಕಂಪೆನಿ ಫ್ಲಿಪ್‌ಕಾರ್ಟ್ ಆಯೋಜಿಕ ಕಾರ್ಯಕ್ರಮದ ಭಾಗವಾಗಿ ಅವರು ಭೇಟಿ ನೀಡಿದ್ದರು. ಬೋಲ್ಟ್ 2010 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.


ನವದೆಹಲಿ: ವಿಶ್ವದ ಅತ್ಯಂತ ವೇಗದ ಓಟಗಾರ, ಎಂಟು ಒಲಿಂಪಿಕ್ ಚಿನ್ನ ವಿಜೇತ ಜಮೈಕದ ಉಸೇನ್ ಬೋಲ್ಟ್(Usain Bolt) ಸೆಪ್ಟೆಂಬರ್ 26ರಿಂದ 28ರವರೆಗೆ ಭಾರತಕ್ಕೆ ಭೇಟಿ(Usain Bolt visit India) ನೀಡಲಿದ್ದಾರೆ. ಇದು ಭಾರತಕ್ಕೆ ಅವರು ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಇದಕ್ಕೂ ಮೊದಲು, ಅವರು 2014ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ಬಾರಿ ದೆಹಲಿ ಮತ್ತು ಮುಂಬೈಗೆ ಭೇಟಿ ನೀಡಲಿದ್ದಾರೆ. ಶಾಲಾ ಮಕ್ಕಳ ರಾಷ್ಟ್ರವ್ಯಾಪಿ ಸ್ಪ್ರಿಂಟ್ ಚಾಲೆಂಜ್ (ವೇಗದ ಓಟದ ಸ್ಪರ್ಧೆ) ಫೈನಲ್‌ನಲ್ಲಿ ಬೋಲ್ಟ್ ಪಾಲ್ಗೊಳ್ಳಲಿದ್ದಾರೆ.
ಭಾರತ ಪ್ರವಾಸದ ಬಗ್ಗೆ ಮಾತನಾಡಿರುವ ಬೋಲ್ಟ್ "ನಾನು ಭಾರತಕ್ಕೆ ಮರಳಲು ಉತ್ಸುಕನಾಗಿದ್ದೇನೆ. ಇಲ್ಲಿನ ಶಕ್ತಿ, ಜನರು ಮತ್ತು ಕ್ರೀಡೆಯ ಮೇಲಿನ ಉತ್ಸಾಹ ನಿಜಕ್ಕೂ ಸಾಟಿಯಿಲ್ಲ. ನನಗೆ ಭಾರತದಲ್ಲಿ ಬಹಳಷ್ಟು ಅಭಿಮಾನಿಗಳಿದ್ದಾರೆ ಮತ್ತು ಈ ವರ್ಷದ ಕೊನೆಯಲ್ಲಿ ಅಲ್ಲಿಗೆ ನನ್ನ ಭೇಟಿಯನ್ನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ" ಎಂದು ಬೋಲ್ಟ್ ತಮ್ಮ ಮುಂಬರುವ ಭೇಟಿಯ ಬಗ್ಗೆ ಹೇಳಿದರು.
2014ರಲ್ಲಿ ಬೆಂಗಳೂರಿಗೆ ಬಂದಿದ್ದು ಅವರ ಭಾರತದ ಮೊದಲ ಪ್ರವಾಸವಾಗಿತ್ತು. ಪೂಮಾ ಕಂಪೆನಿ ಮತ್ತು ಇ–ಕಾಮರ್ಸ್ ಕಂಪೆನಿ ಫ್ಲಿಪ್‌ಕಾರ್ಟ್ ಆಯೋಜಿಕ ಕಾರ್ಯಕ್ರಮದ ಭಾಗವಾಗಿ ಅವರು ಭೇಟಿ ನೀಡಿದ್ದರು. ಬೋಲ್ಟ್ 2010 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಇದರಿಂದ ಅವರ ಓಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಾರತೀಯ ಅಭಿಮಾನಿಗಳಿಗೆ ಕೈತಪ್ಪಿತ್ತು.
ಇದನ್ನೂ ಓದಿ IND vs ENG 4th Test: ಬುಮ್ರಾಗೆ ಮತ್ತೆ ವಿಶ್ರಾಂತಿ; ನಾಲ್ಕನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಹಲವು ಬದಲಾವಣೆ
ಚಿನ್ನಸ್ವಾಮಿಗೆ ಭೇಟಿ ನೀಡಿದ್ದ ವೇಳೆ ಬೋಲ್ಟ್ ಅವರು ಯುವರಾಜ್ ಸಿಂಗ್ ಜತೆ ಕ್ರಿಕೆಟ್ ಕೂಡ ಆಡಿದ್ದರು. ಬಳಿಕ 100 ಮೀ. ಓಟವನ್ನು ಕೂಡ ಓಡಿದ್ದರು. ಈ ವೇಳೆ ಯುವರಾಜ್ ಅವರು ಬೋಲ್ಟ್ ಹಿಂದಿಕ್ಕಿದ್ದರು. ಬಳಿಕ ಇಡೀ ವಿಶ್ವದಲ್ಲಿ ನಿಮ್ಮನ್ನ ಸೋಲಿಸಿರುವ ಏಕೈಕ ವ್ಯಕ್ತಿ ಬಹುಶಃ ನಾನೊಬ್ಬನೇ...’ ಎಂದು ಯುವರಾಜ್ ಸಿಂಗ್ ತಮಾಷೆಯಾಗಿ ಟ್ವೀಟ್ ಮಾಡಿದ್ದರು.