Saturday, 7th September 2024

ಇಂದು ಸನ್‌ರೈಸರ್ಸ್ ಹೈದರಾಬಾದ್ – ಕೋಲ್ಕತಾ ನೈಟ್ ರೈಡರ್ಸ್ ಹಣಾಹಣಿ

ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಭಾನುವಾರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿಸಲಿದೆ.

ಎಸ್‌ಆರ್‌ಎಚ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕತ್ವ, ಲೆಗ್ ಸ್ಪಿನ್ನರ್ ರಶೀದ್ ಖಾನ್, ಕೇನ್ ವಿಲಿಯಮ್‌ಸನ್, ಜಾನಿ ಬೇರ್‌ಸ್ಟೊ, ಜೇಸನ್ ರಾಯ್, ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಬೆಂಬಲ ಹೈದರಾಬಾದ್ ತಂಡಕ್ಕಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗ್ಯುಸನ್, ಶಿವಂ ಮವಿ, ಪ್ರಸಿದ‌್ಧ ಕೃಷ್ಣ, ಆಂಡ್ರೆ ರಸೆಲ್ ಮತ್ತು ಬೆನ್ ಕಟಿಂಗ್ ಬೆಂಬಲ ಇದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಸಂಜೆ 7:30ಕ್ಕೆ ಆರಂಭವಾಗಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!