Thursday, 19th September 2024

ಲಂಕೆಗೆ ಮತ್ತೆ ಸೋಲು: ಆಸೀಸ್‌ಗೆ ಟಿ-20 ಸರಣಿ

ಮೆಲ್ಬೋರ್ನ್:
ಡೇವಿಡ್ ವಾರ್ನರ್(ಔಟಾಗದೆ 57 ರನ್) ಅವರ ಸತತ ಮೂರನೇ ಅರ್ಧ ಶತಕದ ಬಲದಿಂದ ಆಸ್ಟ್ರೇಲಿಯಾ ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಚುಟುಕು ಸರಣಿಯನ್ನು ಆಸೀಸ್ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಅಡಿಲೇಡ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ 134 ರನ್ ಗಳಿಂದ ಹಾಗೂ ಬ್ರಿಿಸ್ಬೇನ್ ನಲ್ಲಿ ಇನ್ನೂ ಏಳು ಓವರ್ ಗಳು ಬಾಕಿ ಇರುವಂತೆ 9 ವಿಕೆಟ್ ಗಳಿಂದ ಜಯ ಸಾಧಿಸಿತ್ತು.

ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ್ದ ಪ್ರವಾಸಿ ಶ್ರೀಲಂಕಾ ನಿಗದಿತ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆೆ 142 ರನ್ ದಾಖಲಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ 17.4 ಓವರ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.

ಸತತ ಮೂರನೇ ಅರ್ಧ ಶತಕ:
ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪ್ರಮುಖ ಆಕರ್ಷಣೆ ಕಂಡಿದ್ದ ಆಸ್ಟ್ರೇಲಿಯಾ ಎಡಗೈ ಬ್ಯಾಾಟ್‌ಸ್‌ ಮನ್ ಡೇವಿಡ್ ವಾರ್ನರ್ ಆಡಿದ ಎಲ್ಲ ಪಂದ್ಯಗಳಲ್ಲಿ ಸತತ ಮೂರು ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಒಂದು ಶತಕ ದಾಖಲಾಗಿತ್ತು. ಶುಕ್ರವಾರದ ಪಂದ್ಯದಲ್ಲಿ ವಾರ್ನರ್ 50 ಎಸೆತಗಳಲ್ಲಿ 57 ರನ್ ಗಳಿಸಿ ತಂಂಡವನ್ನು ಬಹುಬೇಗ ಗೆಲುವಿನ ದಾಟಿಸಿದರು. ಫಿಂಚ್ 37 ರನ್ ಹಾಗೂ ಆ್ಯಸ್ಟನ್ ಟರ್ನರ್ ಅಜೇಯ 22 ರನ್ ಗಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಮಾಡಿದ್ದ ಪ್ರವಾಸಿ ಶ್ರೀಲಂಕಾ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕುಸಾಲ್ ಪೆರೆರಾ 45 ಎಸೆತಗಳಲ್ಲಿ 57 ರನ್ ಗಳಿಸಿ ತಂಡಕ್ಕೆೆ ಆಸರೆಯಾಗಿದ್ದರು. ಇನ್ನುಳಿದ ಬ್ಯಾಾಟ್‌ಸ್‌ ಮನ್ ಗಳು ಹೇಳಿಕೊಳ್ಳುವಂಥ ಬ್ಯಾಾಟಿಂಗ್ ಮಾಡಲೇ ಇಲ್ಲ. ಇದರ ಪರಿಣಾಮ ಲಂಕಾ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾಾರ್ಕ್, ಕೇನ್ ರಿಚರ್ಡ್‌ಸನ್ ಹಾಗೂ ಪ್ಯಾಾಟ್ ಕಮಿನ್‌ಸ್‌ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 20 ಓವರ್ ಗಳಿಗೆ 142/6 (ಕುಸಾಲ್ ಪೆರೆರಾ 57, ಆವಿಷ್ಕಾಾ ಫೆರ್ನಾಂಡೊ 20; ಮಿಚೆಲ್ ಸ್ಟಾಾರ್ಕ್32 ಕ್ಕೆೆ 2, ಕೇನ್ ರಿಚರ್ಡ್‌ಸನ್ 25 ಕ್ಕೆೆ 2, ಪ್ಯಾಾಟ್ ಕಮಿನ್‌ಸ್‌ 23 ಕ್ಕೆೆ 2)
ಆಸ್ಟ್ರೇಲಿಯಾ: 17.4 ಓವರ್ ಗಳಿಗೆ 145/3 (ಡೇವಿಡ್ ವಾರ್ನರ್ ಅಜೇಯ 57, ಆ್ಯರೋನ್ ಫಿಂಚ್ 37, ಆಸ್ಟನ್ ಟರ್ನರ್ ಅಜೇಯ 22; ಲಸಿತ್ ಮಲಿಂಗಾ 22 ಕ್ಕೆೆ 1, ನುವಾನ್ ಪ್ರದೀಪ್ 20 ಕ್ಕೆೆ 1)