Wednesday, 11th December 2024

ಶ್ರೀಲಂಕಾದ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಜಾ

ಕೊಲಂಬೋ: ಶ್ರೀಲಂಕಾದ ಕ್ರೀಡಾ ಸಚಿವ ರೋಶನ್ ರಣಸಿಂಘೆ ಸೋಮವಾರ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ್ದಾರೆ.

1996ರ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಅವರನ್ನು ಹೊಸ ಮಧ್ಯಂತರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ರಣಸಿಂಘೆ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಏಳು ಸದಸ್ಯರ ಹೊಸ ಸಮಿತಿಯಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರು ಮತ್ತು ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದ್ದಾರೆ. ಮಂಡಳಿಯ ಎರಡನೇ ಅತ್ಯುನ್ನತ ಅಧಿಕಾರಿ, ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ರಾಜೀನಾಮೆ ನೀಡಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ವಾರ ಆತಿಥೇಯ ಭಾರತವನ್ನು ಶ್ರೀಲಂಕಾ 302 ರನ್ ಗಳಿಂದ ಸೋಲಿಸಿದ ನಂತರ ರಣಸಿಂಘೆ ಇಡೀ ಮಂಡಳಿಯ ರಾಜೀನಾಮೆಯನ್ನು ಸಾರ್ವಜನಿಕವಾಗಿ ಒತ್ತಾಯಿಸಿದರು.

ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ 358 ರನ್ನುಗಳ ಗುರಿ ಬೆನ್ನತ್ತಿದ ಶ್ರೀಲಂಕಾ 55 ರನ್ನುಗಳಿಗೆ ಆಲೌಟ್ ಆಗಿದ್ದು, ಇದು ವಿಶ್ವಕಪ್ ಇತಿಹಾಸ ದಲ್ಲಿ ನಾಲ್ಕನೇ ಕನಿಷ್ಠ ಮೊತ್ತವಾಗಿದೆ.

ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳಿಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ರಣಸಿಂಘೆ ಹೇಳುವುದರೊಂದಿಗೆ ಈ ಸೋಲು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.

“ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಕು” ಎಂದು ಹೇಳಿದರು.