ಚೆನ್ನೈ: ಟೀಂ ಇಂಡಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಟೀಂ ಇಂಡಿಯಾ ಇನಿಂಗ್ಸ್‌ನ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಭಾರತದ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ರನ್ನು ಔಟ್ ಮಾಡುವ ಮೂಲಕ ಮಿಚೆಲ್ ಸ್ಟಾರ್ಕ್ ಈ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ಇನಿಂಗ್ಸ್ ನ ಮೊದಲ ಓವರ್ ನ ನಾಲ್ಕನೇ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಔಟ್ ಗೋಯಿಂಗ್ ಬಾಲ್ಗೆ ಇಶಾನ್ ಕಿಶನ್ ಔಟಾದರು. ಸ್ಟಾರ್ಕ್ ಅವರ ಎಸೆತ ಇಶಾನ್ ಕಿಶನ್ ಅವರ ಬ್ಯಾಟ್ನ ಅಂಚಗೆ ಬಡಿದು ಕ್ಯಾಮರೂನ್ ಗ್ರೀನ್ ಅವರ ಕೈ ಸೇರಿತು. ಇದರೊಂದಿಗೆ ಸ್ಟಾರ್ಕ್ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಲಸಿತ್ ಮಾಲಿಂಗ ಅವರ ವಿಶ್ವ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಮುರಿದಿದ್ದಾರೆ. ಸ್ಟಾರ್ಕ್ 19ನೇ ಇನ್ನಿಂಗ್ಸ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಲಸಿತ್ ಮಾಲಿಂಗ ವಿಶ್ವಕಪ್‌ನಲ್ಲಿ 25 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ್ದರು. ಮಿಚೆಲ್ ಸ್ಟಾರ್ಕ್ 2019 ರ ವಿಶ್ವಕಪ್‌ನಲ್ಲಿ ಗರಿಷ್ಠ 27 ವಿಕೆಟ್‌ಗಳನ್ನು ಪಡೆದರು.
:- ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್ ಪಡೆದ ಆಟಗಾರರು
* ಮಿಚೆಲ್ ಸ್ಟಾರ್ಕ್ – 19 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ಲಸಿತ್ ಮಾಲಿಂಗ – 25 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ಗ್ಲೆನ್ ಮೆಕ್‌ಗ್ರಾತ್ – 30 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ಮುತ್ತಯ್ಯ ಮುರಳೀಧರನ್ – 30 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ವಾಸಿಂ ಅಕ್ರಮ್- 33 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್