ಕೊಲಂಬೊ:
ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ ಇನ್ನೂ ಎರಡು ವರ್ಷಗಳ ಕಾಲ ಕ್ರಿಿಕೆಟ್ ನಲ್ಲಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾಾರೆ.
ಮುಂದಿನ ವರ್ಷ ಅಕ್ಟೋೋಬರ್ ಹಾಗೂ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ಬಳಿಕ ಕ್ರಿಿಕೆಟ್ ವೃತ್ತಿಿ ಜೀವನಕ್ಕೆೆ ವಿದಾಯ ಹೇಳುವುದಾಗಿ ಲಸಿತ್ ಮಲಿಂಗಾ ಕಳೆದ ಮಾರ್ಚ್‌ನಲ್ಲಿ ಹೇಳಿದ್ದರು. ಆದರೆ, ಇದೀಗ 36ರ ಪ್ರಾಾಯದ ವೇಗಿ ಯೂ ಟರ್ನ್ ತೆಗೆದುಕೊಂಡಿದ್ದಾಾರೆ. ವಿಶ್ವಕಪ್ ಬಳಿಕವೂ ಆಡುವುದಾಗಿ ತಿಳಿಸಿದ್ದಾಾರೆ.
‘‘ ಟಿ-20 ಪಂದ್ಯದಲ್ಲಿ ಬೌಲರ್‌ಗೆ ಕೇವಲ ನಾಲ್ಕು ಓವರ್ ಬೌಲಿಂಗ್ ಮಾಡಲು ಅವಕಾಶವಿರುತ್ತದೆ. ಚುಟುಕು ಮಾದರಿ ಬೌಲರ್ ಆಗಿ ನಾನು ನಿಭಾಯಿಸಬಹುದು. ಟಿ-20 ಕ್ರಿಿಕೆಟ್ ನಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಆಡಿದ್ದೇನೆ. ಮುಂದಿನ ಇನ್ನೂ ಎರಡು ವರ್ಷಗಳ ಕಾಲ ಟಿ-20 ಕ್ರಿಿಕೆಟ್‌ನಲ್ಲಿ ಮುಂದುವರಿಯಲು ಶಕ್ತನಿದ್ದೇನೆ.’’ ಎಂದು ಇಎಸ್‌ಪಿಎನ್ ಕ್ರಿಿಕ್‌ಇನ್ಫೋೋಗೆ ತಿಳಿಸಿದ್ದಾಾರೆ.