ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠತ ಆಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಐತಿಹಾಸಿಕ ಮೈಲಿ ಗಲ್ಲೊಂದನ್ನು ದಾಟಿದ್ದಾರೆ.
ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಕೇವಲ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ. ಈ ಸಾಧನೆ ಮಾಡಿದ ಮತ್ತೋರ್ವ ಆಟಗಾರ ಅವರದೇ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನದಾಟದ 50ನೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ ಟ್ರೆವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ 600 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಸಾಲಿಗೆ ಸೇರಿಕೊಂಡರು.
ಸ್ಟುವರ್ಟ್ ಬ್ರಾಡ್ ತವರು ನೆಲದಲ್ಲಿ ಮಾತ್ರವಲ್ಲದೆ ತವರಿನಾಚೆಯೂ ಅದ್ಭುತ ಪ್ರದ ರ್ಶನ ನೀಡಿ ಮಿಂಚಿದ್ದಾರೆ. 600 ವಿಕೆಟ್‌ಗಳ ಪೈಕಿ 394 ವಿಕೆಟ್‌ಗಳನ್ನು ಬ್ರಾಡ್ ತವರಿ ನಲ್ಲಿ ಪಡೆದುಕೊಂಡಿದ್ದರೆ ಉಳಿದ 206 ವಿಕೆಟ್‌ಗಳು ವಿದೇಶಿ ನೆಲದಲ್ಲಿ ಪಡೆದಿರುವು ದಾಗಿದೆ.
ಇನ್ನು 600ಕ್ಕೂ ಅಧಿಕ ಟೆಸ್ಟ್ ವಿಕೆಟ್‌ಗಳನ್ನು ಪಡೆದುಕೊಂಡಿರುವ ಬೌಲರ್‌ಗಳ ಅಪರೂಪದ ಪಟ್ಟಿಯಲ್ಲಿ ಸ್ಟುವರ್ಟ್ ಬ್ರಾಡ್ ಈಗ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲಿ ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ ಮತ್ತು ಜೇಮ್ಸ್ ಆಂಡರ್ಸನ್ ಉಳಿದ ನಾಲ್ವರು ಬೌಲರ್‌ಗಳು.
ಈ ಪಂದ್ಯಕ್ಕೂ ಮುನ್ನ ಬ್ರಾಡ್ 598 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಈ ಮೈಲಿಗಲ್ಲು ಸ್ಥಾಪಿಸಲು ಅವರಿಗೆ 2 ವಿಕೆಟ್‌ಗಳ ಅಗತ್ಯವಿತ್ತು.
ಇನ್ನು ಆಶಸ್ ಸರಣಿಯ ಈ ನಾಲ್ಕನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯದ ವೇಳೆಗೆ 288 ರನ್‌ಗಳನ್ನು ಗಳಿಸಿದ್ದ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮೊದಲ ದಿನದಾಟದಲ್ಲಿ ಎರಡು ತಮಡಗಳು ಕೂಡ ಪೈಪೋಟಿ ಯ ಪ್ರದರ್ಶನ ನೀಡಿದ್ದು ಮೊದಲ ದಿನದ ಗೌರವವನ್ನು ಹಂಚಿಕೊಂಡಿದೆ. ಹೀಗಾಗಿ ಎರಡನೇ ದಿನದಾಟ ಈಗ ಕುತೂಹಲ ಮೂಡಿಸಿದೆ.