ಕೊಲಂಬೋ: ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಂಬರುವ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಸುರೇಶ್ ರೈನಾ ಈ ಹರಾಜಿಗಾಗಿ ತಮ್ಮ ಹೆಸರು ನೊಂದಾಯಿಸಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ನ 2023ನೇ ಆವೃತ್ತಿಗಾಗಿ ಜೂ.14 ಬುಧವಾರ ಹರಾಜು ಪ್ರಕ್ರಿಯೆ ನಡೆಯಲಿದೆ. USD 50,000 ಮೂಲಬೆಲೆಯನ್ನು ಹೊಂದಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ. ಜುಲೈ 30ರಿಂದ ಆರಂಭವಾಗಿ ಆಗಸ್ಟ್ 20ರಂದು ಈ ಟೂರ್ನಿ ಅಂತ್ಯವಾಗಲಿದೆ.
2022ರ ಸಪ್ಟೆಂಬರ್ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ ಬಳಿಕ ವಿದೇಶಿ ಲೀಗ್ಗಳ ಮೇಲೆ ಚಿತ್ತನೆಟ್ಟಿದ್ದಾರೆ.
2022ರ ಡಿಸೆಂಬರ್ನಲ್ಲಿ ಆರಂಭವಾದ ಅಬುದಾಬಿ ಟಿ10 ಲೀಗ್ನಲ್ಲಿ ಆಡಿದ್ದ ರೈನಾ ಡೆಕ್ಕನ್ ಗ್ಲಾಡಿಯೇಟರ್ ಪರವಾಗಿ ಕಣಕ್ಕಿಳಿದಿದ್ದರು. ಕಳೆದ ಮಾರ್ಚ್ನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿಯೂ ಭಾಗಿಯಾಗಿದ್ದರು.
ಐಪಿಎಲ್ನಲ್ಲಿ ಸುರೇಶ್ ರೈನಾ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಊರ್ನಿಯಲ್ಲಿ ಭಾಗವಹಿಸುವ ಎಲ್ಲಾ ಐದು ತಂಡಗಳು ಕೂಡ 500,000 ಯುಎಸ್ ಡಾಲರ್ ಹೊಂದಿದ್ದು ಪಾಕಿಸ್ತಾನದ ಬಾಬರ್ ಅಜಂ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಟೂರ್ನಿಯಲ್ಲಿ ಭಾಗವಹಿಸಿರುವ ಪ್ರಮುಖ ಅಂತಾರಾಷ್ಟ್ರೀಯ ಸ್ಟಾರ್ ಕ್ರಿಕೆಟಿಗರಾಗಿದ್ದಾರೆ.
ಮಿಸ್ಟರ್ ಐಪಿಎಲ್ ಎಂದೇ ಖ್ಯಾತವಾಗಿದ್ದ ಸುರೇಶ್ ರೈನಾ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಎಲ್ಪಿಎಲ್ನ ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ.