ಮುಂಬಯಿ: ಸ್ಪರ್ಧಾತ್ಮಕ ಕ್ರಿಕೆಟ್ಗೆ ಮೊಹಮ್ಮದ್ ಶಮಿ(Mohammed Shami) ಪುನರಾಗಮನ ಮಾಡಿದರೂ, ಅವರು ಭಾರತ ತಂಡ ಸೇರುವುದು ಇನ್ನಷ್ಟು ವಿಳಂಬವಾಗಲಿದೆ. ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿಯ ಪಂದ್ಯದಲ್ಲಿ ಬಂಗಾಳ ಪರ ಆಡಿದ್ದ ಶಮಿ ಒಟ್ಟು 7 ವಿಕೆಟ್ ಕಿತ್ತು ಮಿಂಚಿದ್ದರು. ಹೀಗಾಗಿ ಅವರು ಸದ್ಯದಲ್ಲೇ ಆಸ್ಟ್ರೇಲಿಯಾಕ್ಕೆ ವಿಮಾನ ಏರಲಿದ್ದಾರೆ ಎನ್ನಲಾಗಿತ್ತು. ಇದೀಗ ಮುಂದಿನ ಶನಿವಾರ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(Syed Mushtaq Ali Trophy) ಟಿ20 ಪಂದ್ಯಾವಳಿಗೆ ಪ್ರಕಟಿಸಲಾದ 22 ಸದಸ್ಯರ ಬಂಗಾಳ(Bengal squad) ತಂಡದಲ್ಲಿ ಸ್ಥಾನ ನೀಡಲಾಗಿದೆ. ಹೀಗಾಗಿ ಶಮಿ ಟೀಮ್ ಇಂಡಿಯಾ ಸೇರ್ಪಡೆ ತಡವಾಗುವುದು ಖಚಿತವಾಗಿದೆ.
ಶಮಿ ಇನ್ನಷ್ಟು ದೇಶೀಯ ಪಂದ್ಯಗಳಲ್ಲಿ ಆಡಿ ಹಿಂದಿನ ಲಯ ಕಂಡುಕೊಳ್ಳಲಿ ಎಂದು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಬಯಸಿರುವುದರಿಂದ ಅವರನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಡುವಂತೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ಶಮಿ ಮೂರನೇ ಅಥವಾ ನಾಲ್ಕನೇ ಟೆಸ್ಟ್ ವೇಳೆಗೆ ಭಾರತ ತಂಡ ಸೇರುವ ಸಾಧ್ಯತೆ ಇದೆ. ಬಂಗಾಳ ಪರ ಆಡಿದ್ದ ಶಮಿ ಪಂದ್ಯದಲ್ಲಿ 43.2 ಓವರ್ ಎಸೆದು ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದಾರೆ. ಜತೆಗೆ ಪಂದ್ಯದಲ್ಲಿ ಏಳು ವಿಕೆಟ್ ಕಿತ್ತಿದ್ದು, ಅಲ್ಲದೆ ಬ್ಯಾಟಿಂಗ್ನಲ್ಲಿ 36 ರನ್ ಗಳಿಸಿ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದರು.
ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್ಗಳನ್ನು ಪಡೆದಿದ್ದಾರೆ. ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ INDW vs AUSW: ಆಸೀಸ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ; ಶಫಾಲಿಗೆ ಕೊಕ್
ಬಂಗಾಳ ತಂಡ
ಸುದೀಪ್ ಘರಾಮಿ (ನಾಯಕ), ಮೊಹಮ್ಮದ್ ಶಮಿ, ಅಭಿಷೇಕ್ ಪೊರೆಲ್, ಸುದೀಪ್ ಚಟರ್ಜಿ, ಶಹಬಾಜ್ ಅಹ್ಮದ್, ಕರಣ್ ಲಾಲ್, ರಿತ್ತಿಕ್ ಚಟರ್ಜಿ, ರಿತ್ವಿಕ್ ರಾಯ್ ಚೌಧರಿ, ಶಕೀರ್ ಹಬೀಬ್ ಗಾಂಧಿ, ರಂಜೋತ್ ಸಿಂಗ್ ಖೈರಾ, ಪ್ರಯಾಸ್ ರಾಯ್ ಬರ್ಮನ್, ಅಗ್ನಿವ್ ಪಾನ್, ಪ್ರದೀಪ್ತಾ ಪ್ರಮಾನ್, ಪ್ರದೀಪ್ತಾ ಪ್ರಮಾನ್ ಪೊರೆಲ್, ಮೊಹಮ್ಮದ್ ಕೈಫ್, ಸೂರಜ್ ಸಿಂಧು ಜೈಸ್ವಾಲ್, ಶಯಾನ್ ಘೋಷ್, ಕಾನಿಷ್ಕ್ ಸೇಠ್, ಸೌಮ್ಯದೀಪ್ ಮಂಡಲ್.