Thursday, 12th December 2024

ಏಕದಿನ ಸರಣಿಗೂ ಟಿ ನಟರಾಜನ್ ಆಯ್ಕೆ

ಸಿಡ್ನಿ: ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ತಮಿಳುನಾಡು ವೇಗಿ ಟಿ ನಟರಾಜನ್ ರನ್ನು ಏಕದಿನ ಸರಣಿಗೂ ಆಯ್ಕೆ ಮಾಡಲಾಗಿದೆ. ಆದರೆ ಗಾಯದ ಸಮಸ್ಯೆಯಿಂದ ಇಶಾಂತ್ ಶರ್ಮಾ ಆಸೀಸ್ ಸರಣಿಯಿಂದ ಹೊರಬಿದ್ದಿದ್ದಾರೆ.

ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ ನೆಸ್ ಟ್ರೈನಿಂಗ್ ಪಡೆಯುತ್ತಿದ್ದಾರೆ. ರೋಹಿತ್ ಅವರ ಬಗ್ಗೆ ಡಿಸೆಂಬರ್ 11ರವರೆಗೆ ಕಾದು ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಆಸೀಸ್ ವಿರುದ್ಧದ ಟೆಸ್ಟ್ ಸರಣಿ ಡಿ.17ರಿಂದ ಆರಂಭವಾಗಲಿದೆ. ಆಸೀಸ್ ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಅವಧಿ ಇರುವ ಕಾರಣ ಡಿ.11ರ ನಂತರ ರೋಹಿತ್ ತೆರಳಿದರೆ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

ವೇಗಿ ನವದೀಪ್ ಸೈನಿ ಗಾಯಗೊಂಡಿದ್ದ ಕಾರಣ ನಟರಾಜನ್ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ನವದೀಪ್ ಸೈನಿ ಫಿಟ್ ಆಗಿದ್ದು, ಇಂದಿನ ಪಂದ್ಯದಲ್ಲಿ ಆಡಲಿಳಿದಿದ್ದಾರೆ.