Saturday, 14th December 2024

ಅಕ್ಟೋಬರ್.16- ನ.13ರವರೆಗೆ ಟಿ20 ವಿಶ್ವಕಪ್‌

ಮುಂಬೈ: ವರ್ಷಾಂತ್ಯದಲ್ಲಿ ಮತ್ತೊಂದು ಟಿ20 ವಿಶ್ವಕಪ್‌ ಹಬ್ಬ ಇರಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಅಧಿಕೃತ ವಾಗಿ ಪ್ರಕಟಿಸಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿಯೂ ಭಾರತ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಆರಂಭಿಸ ಲಿದೆ. ಅಕ್ಟೋಬರ್ 23ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯಲಿದೆ.

2020ರಲ್ಲಿ ನಡೆಯಬೇಕಿದ್ದ ವಿಶ್ವಕಪ್‌ಅನ್ನು ಕರೋನಾ ವೈರಸ್ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾ ಗಿದೆ. ಒಟ್ಟು 45 ಪಂದ್ಯಗಳು ನಡೆಯಲಿದ್ದು ಅಡಿಲೇಡ್, ಬ್ರಸ್ಬೇನ್, ಜೀಲಾಂಗ್ ಹೋಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ.

ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು ಸೂಪರ್ 12 ಹಂತಕ್ಕೆ ತಂಡಗಳು ಸೆಣಸಾಡಲಿದೆ. 2014ರ ಚಾಂಪಿಯನ್ ಶ್ರೀಲಂಕಾ ನಮೀಬಿಯಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ವೆಸ್ಟ್ ಇಂಡೀಸ್ ಕೂಡ ಅರ್ಹತಾ ಸುತ್ತಿನಿಂದ ತಮ್ಮ ಸ್ಪರ್ಧೆ ಆರಂಭಿಸಲಿದೆ.

ಆತಿಥೇಯ ಆಸ್ಟ್ರೇಲಿಯಾ ಗ್ರೂಫ್ 1ರಲ್ಲಿದ್ದು ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಹಾಗೂ ಅರ್ಹತಾ ಸುತ್ತಿನ ಎರಡು ತಂಡಗಳು ಈ ಗುಂಪಿನಲ್ಲಿ ಇರಲಿದೆ. ಗ್ರೂಫ್ 2ರಲ್ಲಿ ಭಾರತ, ಪಾಕಿ ಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಅರ್ಹತಾ ಸುತ್ತಿನಿಂದ ತೇರ್ಗಡೆಯಾದ ಎರಡು ತಂಡಗಳು ಸೇರ್ಪಡೆಯಾಗಲಿದೆ.

ಸೂಪರ್ 12 ಹಂತದ ಮೊದಲ ಪಂದ್ಯ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಅಕ್ಟೋಬರ್ 22ರಂದು ಎಸ್‌ಸಿಜಿಯಲ್ಲಿ ಈ ಮುಖಾಮುಖಿ ನಡೆಯಲಿದೆ. ಎರಡು ತಂಡಗಳು ಕಳೆದ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಇನ್ನು ವಿಶ್ವ ಕ್ರಿಕೆಟ್‌ನ ಬದ್ಧ ಎದುರಾಳಿಗಳಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಎಂಸಿಜಿಯಲ್ಲಿ ಈ ಮಯಖಾಮುಖಿ ನಡೆಯ ಲಿದೆ. ಇದೇ ಮೈದಾನದಲ್ಲಿ ಮತ್ತೊಂದು ಬದ್ಧ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕೂಡ ಮುಖಾಮುಖಿಯಾಗಲಿದ್ದು ಈ ಪಂದ್ಯ ಅಕ್ಟೋಬರ್ 28ರಂದು ನಡೆಯಲಿದೆ.