Saturday, 7th September 2024

ಇಂಗ್ಲೆಂಡ್ ಗೆಲುವಿಗೆ 337 ರನ್ ಗುರಿ: ರಾಹುಲ್ ಶತಕ, ಕೊಹ್ಲಿ, ಪಂತ್‌ ಫಿಫ್ಟಿ

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 2 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಇತ್ತೀಚಿನ ವರದಿಯಂತೆ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲುವಿಗೆ 337 ರನ್ ಗುರಿ ನೀಡಿದೆ.

ಟೀಂ ಇಂಡಿಯಾ ಪರ ಕೆ.ಎಲ್. ರಾಹುಲ್ ಆಕರ್ಷಕ ಶತಕ ಗಳಿಸಿದರು. ರಿಷಬ್ ಪಂತ್ 7 ಸಿಕ್ಸರ್, 3 ಬೌಂಡರಿ ಒಳಗೊಂಡ 77 ರನ್ ಸಿಡಿಸಿದರು. ನಾಯಕ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಬಾರಿಸಿ, ಮಿಂಚು ಹರಿಸಿದರು.

ರೋಹಿತ್ ಶರ್ಮಾ 25, ವಿರಾಟ್ ಕೊಹ್ಲಿ 66, ಕೆ.ಎಲ್. ರಾಹುಲ್ 108, ರಿಷಬ್ ಪಂತ್ 77, ಹಾರ್ದಿಕ್ ಪಾಂಡ್ಯ 35, ಕೃನಾಲ್ ಪಾಂಡ್ಯ ಅಜೇಯ 12 ರನ್ ಗಳಿಸಿ ದ್ದಾರೆ.

ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್ 1, ರೀಸ್ ಟೋಪ್ಲಿ 2 ಟಾಮ್ ಕರ್ರನ್ 2, ಆದಿಲ್ ರಶೀದ್ 1 ವಿಕೆಟ್ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!