Sunday, 15th December 2024

ಮುಂಬೈನಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 372 ರನ್ ಅಂತರದಿಂದ ಗೆದ್ದ ಟೀಂ ಇಂಡಿಯಾ ನಾಲ್ಕನೇ ದಿನದ ಆರಂಭದಲ್ಲೇ ಪಂದ್ಯ ಮುಗಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರ ದಿಂದ ಗೆದ್ದುಕೊಂಡಿದೆ.

ಗೆಲ್ಲಲು 540 ರನ್ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ಮೂರನೇ ದಿನದಾಟದ ಅಂತ್ಯದಲ್ಲಿ ಐದು ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಒಂದೆಡೆ ಹೆನ್ರಿ ನಿಕೋಲ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ ಮತ್ತೊಂದೆಡೆ ಸತತ ವಿಕೆಟ್ ಗಳು ಉರುಳಿತು.

ಸ್ಪಿನ್ ದಾಳಿ ದಾಳಿ ನಡೆಸಿದ ಜಯಂತ್ ಯಾದವ್ ನಾಲ್ಕು ವಿಕೆಟ್ ಕಿತ್ತರು. ಕೊನೆಯ ವಿಕೆಟ್ ಅಶ್ವಿನ್ ಪಾಲಾಯಿತು. ನ್ಯೂಜಿ ಲ್ಯಾಂಡ್ ತಂಡ 167 ರನ್ ಗೆ ಆಲೌಟಾಯಿತು.

ಕಿವೀಸ್ ಪರ ಡ್ಯಾರೆಲ್ ಮಿಚೆಲ್ 60 ರನ್ ಗಳಿಸಿದರೆ, ನಿಕೋಲ್ಸ್ 44 ರನ್ ಗಳಿಸಿ ದರು. ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಭಾರತದ ಪರ ಜಯಂತ್ ಯಾದವ್ ಮತ್ತು ಅಶ್ವಿನ್ ತಲಾ ನಾಲ್ಕು ವಿಕೆಟ್ ಕಿತ್ತರೆ, ಒಂದು ವಿಕೆಟ್ ಅಕ್ಷರ್ ಪಟೇಲ್ ಪಡೆದರು.

ಈ ಮೊದಲು ಟಾಸ್ ಗೆದ್ದು ಮೊದಲು ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ 150 ರನ್‌ ಹಾಗೂ ಆಲ್ರೌಂಡರ್‌ ಅಕ್ಷರ್‌ ಪಟೇಲ್ ಅವರ 52 ರನ್‌ ತಂಡಕ್ಕೆ ಭದ್ರ ಬುನಾದಿ ಹಾಕಿತು.

ಸಂಕ್ಷಿಪ್ತ ಸ್ಕೋರ್:

ಭಾರತ: 325 ಮತ್ತು 276-7

ನ್ಯೂಜಿಲ್ಯಾಂಡ್: 62 ಮತ್ತು 167.