ಹರಾರೆ: ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದೆ. ಭಾರತೀಯ ವೇಗಿ ದೀಪಕ್ ಚಹಾರ್ ತಮ್ಮ ವೃತ್ತಿಜೀವನದ ಅತ್ಯುತ್ತಮ 3/27 ಪ್ರದರ್ಶನ ನೀಡಿದರು.
ಚಹಾರ್ ಅವರು ಏಳು ಓವರ್‌ಗಳನ್ನು ಬೌಲ್ ಮಾಡಿ ಆತಿಥೇಯ ಜಿಂಬಾಬ್ವೆ ಬ್ಯಾಟಿಂಗ್ ಕ್ರಮಾಂಕವನ್ನು ಅಸ್ಥಿರಗೊಳಿಸಿದರು.
ದೀಪಕ್ ಚಹಾರ್ ಮೂರು ಅಗ್ರ ಕ್ರಮಾಂಕದ ವಿಕೆಟ್‌ಗಳನ್ನು ಪಡೆದರು. ಅಲ್ಲಿಂದ ಉಳಿದ ಬೌಲರ್‌ಗಳು ಜಿಂಬಾಬ್ವೆ ತಂಡದ ವಿರುದ್ಧ ನಿಯಂತ್ರಣ ಸಾಧಿಸಿ ಕೇವಲ 189 ರನ್‌ಗಳಿಗೆ ಕಟ್ಟಿ ಹಾಕಿದರು.
ಪ್ರತಿಯಾಗಿ ಟೀಂ ಇಂಡಿಯಾದ ಆರಂಭಿಕರು ತಮ್ಮ ವಿಕೆಟ್ ಕಳೆದುಕೊಳ್ಳದೆ ಇನ್ನೂ ೧೯ ಓವರ್ ಬಾಕಿ ಇರುವಂತೆಯೇ ೧೯೨ ಬಾರಿಸಿ, ವಿಜಯ ಪತಾಕೆ ಹಾರಿಸಿದರು.
ಆರಂಭಿಕರಾದ ಶಿಖರ್ ಧವನ್ ಹಾಗೂ ಗಿಲ್ ಕ್ರಮವಾಗಿ ೮೧, ೮೨ ರನ್ ಬಾರಿಸಿದರು. ಒಟ್ಟು ೧೯ ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಡಿ ಬಂದವು.