ಲಾರ್ಡ್ಸ್: ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ ನಡುವಿನ 2 ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ ಗುರಿಯನ್ನು ಬೆನ್ನಟ್ಟು ವಲ್ಲಿ ಎಡವಿದೆ.
ನಾಯಕ ರೋಹಿತ್ ಖಾತೆ ತೆರೆಯದೆ ಔಟಾದರು. ೩೧ ರನ್ ಗಳಿಸುವಷ್ಟರಲ್ಲಿ ಅಗ್ರ ನಾಲ್ವರನ್ನು ಕಳೆದುಕೊಂಡ ಭಾರತಕ್ಕೆ ಸೂರ್ಯಕುಮಾರ ಯಾದವ್ ಹಾಗೂ ಪಾಂಡ್ಯ ಆಧರಿಸಿದರು. ಇಬ್ಬರು ವೈಯಕ್ತಿಕವಾಗಿ ೩೦ ರೊಳಗೆ ವಿಕೆಟ್ ಒಪ್ಪಿಸಿದರು. ಇತ್ತೀಚಿನ ವರದಿ ಪ್ರಕಾರ ಜಡೇಜಾ ಹಾಗೂ ಶಮಿ ಇನ್ನಿಂಗ್ಸ್ ಮುಂದುವರೆಸಿದ್ದಾರೆ.
ಇದಕ್ಕೂ ಮೊದಲು, ಚಹಲ್ ದಾಳಿಗೆ ಕುಸಿದ ಇಂಗ್ಲೆಂಡ್ ೨೪೬ ರನ್ನಿಗೆ ಆಲೌಟಾಯಿತು. ಚಹಲ್ ನಾಲ್ಕು ವಿಕೆಟ್ ಕಿತ್ತರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಪರ ಆಲ್ರೌಂಡರ‍್ ಮೋಯಿನ್ ಅಲಿ ಸರ್ವಾಧಿಕ ೪೭ ರನ್ ಗಳಿಸಿದರು.
ಜೇಸನ್ ರಾಯ್ (33 ಎಸೆತಗಳಲ್ಲಿ 23 ರನ್) ಜಾನಿ ಬೈರ್ಸ್ಟೋವ್ (38 ಎಸೆತಗಳಲ್ಲಿ 38 ರನ್) ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. ಭಾರತದ ಪರ ಮೊಹಮ್ಮದ್ ಶಮಿ, 48 ರನ್ ನೀಡಿ 1 ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.