ಈಗಾಗಲೇ, ಟೀಮ್ ಇಂಡಿಯಾ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದು, ಮೂರನೇ ಪಂದ್ಯ ಭಾರತದ ಪಾಲಿಗೆ ಔಪಚಾರಿಕ ಆಗಲಿದೆ. ಅವಕಾಶ ಸಿಗದ ಯುವ ಆಟಗಾರರನ್ನು ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಸಬಹುದು. ಅದರಂತೆ ಯುಜ್ವೇಂದ್ರ ಚಹಾಲ್ ಹಾಗೂ ಇಶಾನ್ ಕಿಶನ್ ಸ್ಥಾನ ಖಚಿತ ಎಂದೇ ಹೇಳಬಹುದು.
ಆವೇಶ್ ಖಾನ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶ ಎದುರು ನೋಡುತ್ತಿದ್ದಾರೆ. ದೀಪಕ್ ಚಹರ್ ಸ್ಥಾನ ಛಾನ್ಸ್ ಸಿಗುವ ಸಾಧ್ಯತೆಯಿದೆ. ಸಿಕ್ಕ ಅವಕಾಶ ದಲ್ಲಿ ಹರ್ಷಲ್ ಪಟೇಲ್ ಮಿಂಚಿದ್ದು, ಇದೀಗ ಅವೇಶ್ ಖಾನ್ಗೆ ಅವಕಾಶ ನೀಡಿ ಪರೀಕ್ಷಿಸಬಹುದು.
ರುತುರಾಜ್ ಗಾಯಕ್ವಾಡ್ ಆರಂಭಿಕ ಆಟಗಾರನಾಗಿದ್ದು, ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಕ್ರಮಾಂಕ ಬದಲಿಸಬೇಕಾಗಿ ಬರಬಹುದು. ಅಥವಾ ಒಬ್ಬರು ವಿಶ್ರಾಂತಿ ಪಡೆಯಬಹುದು. ಆದಾಗ್ಯೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ.
ಟೀಮ್ ಇಂಡಿಯಾ ಸಂಭಾವ್ಯ ಹೀಗಿರಲಿದೆ:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್
ನ್ಯೂಜಿಲ್ಯಾಂಡ್ ಸಂಭಾವ್ಯ : ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಿಮ್ ಸಿಫೆರ್ಟ್ (ವಿಕೆಟ್ ಕೀಪರ್), ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ (ನಾಯಕ), ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಪಂದ್ಯದ ವಿವರಗಳು:
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ
ದಿನಾಂಕ ಮತ್ತು ಸಮಯ: ನವೆಂಬರ್ 21, ಸಂಜೆ 7:00 PM