ಕ್ಯಾನಬೆರ್ರಾ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾಕ್ಕೆ ಈಗ ಗೆಲುವಿನ ಟಾನಿಕ್ ಬೇಕಿದೆ. ಈಚೆ ಆಸ್ಟ್ರೇಲಿಯಾದ ನಾಯಕ ಆಯರನ್ ಫಿಂಚ್ಗೆ ಏಕದಿನ ಕ್ರಿಕೆಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದ್ದಾರೆ.
ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಪಡೆಯ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಬ್ಯಾಟಿಂಗ್ನಲ್ಲಿಯೂ ಅರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದ್ದರು. ಆದರೆ ದೊಡ್ಡ ಜೊತೆಯಾಟ ಅಡುವಲ್ಲಿ ಎಡವಿದ್ದರು. ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್ ತಮ್ಮ ಹೊಣೆಯನ್ನು ನಿಭಾಯಿಸು ತ್ತಿದ್ದಾರೆ. ‘ಫಿನಿಷರ್’ ಕೊರತೆ ಕಾಡುತ್ತಿದೆ.
ಬೌಲರ್ಗಳು ಯಥೇಚ್ಚವಾಗಿ ರನ್ ಬಿಟ್ಟುಕೊಡುತ್ತಿರುವುದು ಚಿಂತೆಯ ವಿಷಯವಾಗಿದೆ. ಆದ್ದರಿಂದ ಈ ಪಂದ್ಯದಲ್ಲಿ ನವದೀಪ್ ಸೈನಿಗೆ ವಿಶ್ರಾಂತಿ ಕೊಟ್ಟು ಶಾರ್ದೂಲ್ ಠಾಕೂರ್ಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ತಂಗರಸು ನಟರಾಜ್ ಅವರಿಗೆ ಪದಾರ್ಪಣೆಯ ಅವಕಾಶವೂ ಸಿಗಬಹುದು.
ಟೆಸ್ಟ್ ಸರಣಿಯಲ್ಲಿ ಫಿಟ್ ಆಗಿ ಉಳಿಯಲು ಬೂಮ್ರಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ಕೊಟ್ಟರೆ, ಈ ಇಬ್ಬರೂ ಬೌಲರ್ ಗಳಿಗೆ ಅವಕಾಶ ಸಿಗುವುದು ಬಹುತೇಕ ಖಚಿತ.
ಮುಂಬರುವ ಟಿ20 ಮತ್ತು ಟೆಸ್ಟ್ ಸರಣಿಗಳಲ್ಲಿ ಗೆಲುವು ಸಾಧಿಸಬೇಕಾದರೆ ಬೌಲಿಂಗ್ ಪಡೆಯನ್ನು ಬಲಿಷ್ಠಗೊಳಿಸಲು ಈ ಪ್ರಯೋಗಗಳಿಗೆ ತಂಡದ ಆಡಳಿತ ಕೈಹಾಕುವುದು ಅನಿವಾರ್ಯವಾಗಿದೆ. ಕಳೆದೆರಡು ಪಂದ್ಯಗಳಲ್ಲಿ ಭಾರತದ ಬೌಲರ್ಗಳು ಎದುರಾಳಿಗಳಿಗೆ ಒಟ್ಟು 69 ಬೌಂಡರಿ ಮತ್ತು 19 ಸಿಕ್ಸರ್ಗಳನ್ನು ಬಿಟ್ಟುಕಟ್ಟಿದ್ದಾರೆ.
ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಡೇವಿಡ್ ವಾರ್ನರ್ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಆದರೆ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿರುವ ಸ್ಟೀವನ್ ಸ್ಮಿತ್ ಅವರಿಗೆ ಕಡಿವಾಣ ಹಾಕುವ ಸವಾಲು ಬೌಲರ್ಗಳಿಗೆ ಇದೆ. ಆಯರನ್ ಫಿಂಚ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಾರ್ನಸ್ ಲಾಬುಷೇನ್ ಅವರನ್ನು ಕೊನೆಯ ಹಂತದ ಓವರ್ಗಳಲ್ಲಿ ಕಟ್ಟಿಹಾಕುವ ತಂತ್ರ ಕಂಡುಕೊಳ್ಳದಿದ್ದರೆ ಅವರ ಬ್ಯಾಟಿಂಗ್ ಭರಾಟೆಯಲ್ಲಿ ವಿರಾಟ್ ಬಳಗ ಮಂಕಾಗುವುದನ್ನು ಅಲ್ಲಗಳೆಯುವಂತಿಲ್ಲ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಕೆ.ಎಲ್. ರಾಹುಲ್ (ಉಪನಾಯಕ/ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಟಿ. ನಟರಾಜನ್.
ಆಸ್ಟ್ರೇಲಿಯಾ: ಆಯರನ್ ಫಿಂಚ್ (ನಾಯಕ), ಡಾರ್ಸಿ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಷೇನ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ಕೀಪರ್), ಮಿಚೆಲ್ ಸ್ಟಾರ್ಕ್, ಆಯಡಂ ಜಂಪಾ, ಜೋಶ್ ಹ್ಯಾಜಲ್ವುಡ್, ಸೀನ್ ಅಬಾಟ್, ಆಯಷ್ಟನ್ ಆಗರ್, ಕೆಮರಾನ್ ಗ್ರೀನ್, ಮೊಯಸೆಸ್ ಹೆನ್ರಿಕ್ಸ್, ಆಯಂಡ್ರ್ಯೂ ಟೈ, ಡೇನಿಯಲ್ ಸ್ಯಾಮ್ಸ್, ಮ್ಯಾಥ್ಯೂ ವೇಡ್.