Friday, 22nd November 2024

ಮಿಥಾಲಿ ಪಡೆಯ ಕಳಪೆ ಬ್ಯಾಟಿಂಗ್‌: ಇಂಗ್ಲೆಂಡಿಗೆ ಮುನ್ನಡೆ

ಟಾಂಟನ್: ಇಂಗ್ಲೆಂಡ್‌ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಮುಂದೆ ಮಿಥಾಲಿ ರಾಜ್ ಮತ್ತೊಮ್ಮೆ ಮಿಂಚಿದರೂ, ಭಾರತ ತಂಡಕ್ಕೆ ಎರಡನೇ ಪಂದ್ಯದಲ್ಲೂ ಜಯ ತಂದುಕೊಡಲಾಗಲಿಲ್ಲ.

ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮಿಥಾಲಿ (59) ನೆರವಿನಿಂದ ಭಾರತ ಮಹಿಳಾ ತಂಡವು 50 ಓವರ್‌ಗಳಲ್ಲಿ 221 ರನ್‌ ಗಳಿಸಿತು. ಮೊದಲ ಪಂದ್ಯದಲ್ಲಿಯೂ ಮಿಥಾಲಿ ರಾಜ್ ಉತ್ತಮವಾಗಿ ಆಡಿದ್ದರು. ಜೂಲನ್ ಗೋಸ್ವಾಮಿ (ಔಟಾಗದೆ 20) ಮತ್ತು ಪೂನಂ ಯಾದವ್ (10 ರನ್) ಅವರು ಕೊನೆಯ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 29 ರನ್‌ಗಳಿಂದಾಗಿ ತಂಡವು ಇನ್ನೂರು ರನ್‌ಗಳ ಗಡಿ ದಾಟಿತು.

ಇಂಗ್ಲೆಂಡ್‌ನ ಮಧ್ಯಮ ವೇಗಿ ಕೇಟ್ ಕ್ರಾಸ್ (34ಕ್ಕೆ5) ಅವರ ಉತ್ತಮ ದಾಳಿ ಮಾಡಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಬೌಲರ್‌ಗಳಿಗೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಸ್ಮೃತಿ ಮಂದಾನ (22) ಮತ್ತು ಯುವಪ್ರತಿಭೆ ಶಫಾಲಿ ವರ್ಮಾ (44) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 56 ರನ್ ಗಳಿಸಿದರು.

12ನೇ ಓವರ್‌ನಲ್ಲಿ ಮಂದಾನ ವಿಕೆಟ್ ಪಡೆದ ಕೇಟ್ ಕ್ರಾಸ್, ಬಳಿಕ ಜೆಮಿಮಾ ರಾಡ್ರಿಗಸ್‌ (8ರನ್) ಅವರಿಗೂ ಪೆವಿಲಿಯನ್ ದಾರಿ ತೋರಿಸಿದರು. ಶಫಾಲಿ ಕೂಡ ಎಕ್ಸೆಲ್‌ಸ್ಟೋನ್ ಎಸೆತದಲ್ಲಿ ಔಟಾದರು. ಈ ಹಂತದಲ್ಲಿ ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಕೌರ್ (19) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಗಳಿಸಿದರು. ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಕೌರ್ ವಿಕೆಟ್ ಕಬಳಿಸಿದ ಕೇಟ್ ಕ್ರಾಸ್ ಸಂಭ್ರಮಿಸಿದರು. ಕೆಳಕ್ರಮಾಂಕದ ಬ್ಯಾಟರ್‌ಗಳು ಬೇಗನೆ ಔಟಾದರು.

ಸಂಕ್ಷಿಪ್ತ ಸ್ಕೋರು:

ಭಾರತ: 50 ಓವರ್‌ಗಳಲ್ಲಿ 221 (ಸ್ಮೃತಿ ಮಂದಾನ 22, ಶಫಾಲಿ ವರ್ಮಾ 44, ಮಿಥಾಲಿ ರಾಜ್ 59, ಹರ್ಮನ್‌ಪ್ರೀತ್ ಕೌರ್ 19, ಜೂಲನ್ ಗೋಸ್ವಾಮಿ ಔಟಾಗದೆ 20, ಪೂನಂ ಯಾದವ್ 10, ಸೋಫಿ ಎಕ್ಸೆಲ್‌ಸ್ಟೋನ್ 25ಕ್ಕೆ2, ಕೇಟ್ ಕ್ರಾಸ್ 34ಕ್ಕೆ5)

ಇಂಗ್ಲೆಂಡ್‌: ಐದು ವಿಕೆಟ್‌ ನಷ್ಟಕ್ಕೆ 225 (ಲಾರೆನ್‌ ಹಿಲ್‌ 42, ಸೋಫಿಯಾ ಔಟಾಗದೆ 73,  ಕ್ಯಾಥರಿನ್‌ ಬ್ರಂಟ್‌ 33, ಪೂನಮ್‌ ಯಾದವ್ 63/2).