Wednesday, 11th December 2024

ವಿಂಡೀಸ್‌’ಗೆ 192 ರನ್‌ ಗೆಲುವಿನ ಟಾರ್ಗೆಟ್‌

ಫ್ಲೋರಿಡಾ: ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್ ನಡುವೆ ನಾಲ್ಕನೇ ಟಿ-20 ಪಂದ್ಯ ಆರಂಭಗೊಂಡಿದ್ದು, ಟಾಸ್​ ಗೆದ್ದ ಕೆರಿಬಿಯನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ‍್ ಯಾದವ್ ಮೊದಲ ವಿಕೆಟಿಗೆ ಐದು ಓವರ್‌ ಆಗುವಷ್ಟರಲ್ಲಿ 53 ರನ್ ಗಳಿಸಿ, ಬೇರ್ಪಟ್ಟರು. ನಾಯಕ ರೋಹಿತ್ ಶರ್ಮಾ 33 ರನ್ ಬಾರಿಸಿದರು. ಬಳಿಕ ವಿಕೆಟ್‌ ಕೀಪರ್‌ ರಿಷಭ್ ಪಂತ್‌ ಸರ್ವಾಧಿಕ 44 ರನ್ ಬಾರಿಸಿ, ಸರ್ವಾಧಿಕ ಸ್ಕೋರರ್‌ ಎನಿಸಿ ಕೊಂಡರು. ಕೊನೆಯಲ್ಲಿ ಆಲ್ರೌಂಡರ್‌ ಅಕ್ಷರ್‌ ಪಟೇಲ್ ಎರಡು ಸಿಕ್ಸರ್‌ ಹಾಗೂ ಬೌಂಡರಿ ಬಾರಿಸಿ, ತಂಡದ ಮೊತ್ತವನ್ನು 190 ಗಡಿ ದಾಟಿಸಿದರು.

ವಿಂಡೀಸ್‌ ಪರ ಸ್ಪಿನ್ನರ್‌ ಅಕೀಲ್‌ ಹುಸೇನ್‌ ಒಂದು ಹಾಗೂ ಓಬೆಡ್‌ ಮೆಕೆಯ್‌ ಹಾಗೂ ಅಲ್ಜರಿ ಜೋಸೆಫ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

ಪಂದ್ಯ ಆರಂಭಗೊಳ್ಳುವುದಕ್ಕೂ ಸ್ವಲ್ಪ ಗಂಟೆ ಮುಂಚಿತವಾಗಿ ಮಳೆ ಸುರಿದ ಕಾರಣ, ಇಂದಿನ ಪಂದ್ಯ ಸಹ ಅರ್ಧಗಂಟೆ ತಡವಾಗಿ ಆರಂಭಗೊಂಡಿದೆ. ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಟೀಂ ಇಂಡಿಯಾ ಕೆಲವೊಂದು ಬದಲಾವಣೆ ಮಾಡಿದೆ. ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವಕಾಶ ಪಡೆದುಕೊಂಡಿದ್ದು, ಅರ್ಷದೀಪ್ ಸಿಂಗ್​​ಗೆ ಅವಕಾಶ ನೀಡಲಾಗಿದೆ.

ಟೀಂ ಇಂಡಿಯಾ: ರೋಹಿತ್ ಶರ್ಮಾ(ಕ್ಯಾಪ್ಟನ್), ಸೂರ್ಯಕುಮಾರ್ ಯಾದವ್​, ರಿಷಭ್ ಪಂತ್​(ವಿ.ಕೀ), ಸಂಜು ಸ್ಯಾಮ್ಸನ್​​, ದೀಪಕ್ ಹೂಡಾ, ದಿನೇಶ್ ಕಾರ್ತಿಕ್​, ಅಕ್ಸರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್​

ವೆಸ್ಟ್ ಇಂಡೀಸ್ : ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್​), ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿ.ಕೀ), ಜೇಸನ್ ಹೋಲ್ಡರ್, ಡೊಮಿನಿಕ್ ಡ್ರೇಕ್ಸ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್