Friday, 22nd November 2024

ಕೇಪ್‌ಟೌನ್‌ನಲ್ಲಿ ಗೆಲುವು ಕಾಣಲು ಟೀಂ ಇಂಡಿಯಾ ಸಜ್ಜು

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಕೈಚೆಲ್ಲಿರುವ ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಭಾನುವಾರ ಕೇಪ್​ಟೌನ್​ನ ನ್ಯೂಲೆಂಡ್ಸ್ ಮೈದಾನದಲ್ಲಿ ಅಂತಿಮ ಏಕದಿನ ನಡೆಯಲಿದ್ದು ವೈಟ್​ವಾಷ್ ಅವಮಾನದಿಂದ ಪಾರಾಗುವುದು ಹೇಗೆ ಎಂಬ ಚಿಂತೆ ಯಲ್ಲಿದೆ. ಭಾರತದ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಬ್ಯಾಟರ್​ಗಳು ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸುತ್ತಿದ್ದರೆ, ಇತ್ತ ಬೌಲರ್​ಗಳು ಮಧ್ಯಮ ಓವರ್​ಗಳಲ್ಲಿ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ.

ಆಫ್ರಿಕಾ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಲು ಹರಸಾಹಸ ನಡೆಸಿದರೂ ಅದು ಸಾಧ್ಯವಾ ಗಲಿಲ್ಲ. ಎರಡು ಏಕದಿನ ಪಂದ್ಯಗಳಲ್ಲಿ ಭಾರತೀಯ ಬೌಲರ್​ಗಳು ಪಡೆದಿದ್ದು ಆಫ್ರಿಕಾದ ಕೇವಲ 6 ವಿಕೆಟ್​ಗಳನ್ನು ಮಾತ್ರ. ಹೀಗಾಗಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಖಚಿತ.

ಭಾರತ ಪರ ಓಪನರ್​ಗಳಾಗಿ ಶಿಖರ್ ಧವನ್ ಜೊತೆ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಅನುಮಾನ. ರಾಹುಲ್ ಏಕದಿನ ಕ್ರಿಕೆಟ್​ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಇವರು 5ನೇ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ. ಇತ್ತ ರುತುರಾಜ್ ಗಾಯಕ್ವಾಡ್​ಗೆ ಸ್ಥಾನ ನೀಡಿ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಕೊಹ್ಲಿ ನಾಯಕತ್ವ ಬಿಟ್ಟ ನಂತರ ಬ್ಯಾಟಿಂಗ್‌ನಲ್ಲಿ ಹೇಗೆ ಮಿಂಚುತ್ತಾರೆ ಎಂಬ ಕುತೂಹಲ ಮೊದಲ ಪಂದ್ಯದಲ್ಲಿ ನೋಡಿ ದ್ದೆವು. ಆದರೆಮ 2ನೇ ಪಂದ್ಯದಲ್ಲಿ ಸೊನ್ನೆಸುತ್ತಿದ್ದರು. ಹೀಗಾಗಿ ಇಂದಿನ ಕದನದ ಮೇಲೆ ಇವರ ಬ್ಯಾಟಿಂಗ್​ನಿಂದ ಸಾಕಷ್ಟು ನಿರೀಕ್ಷೆಗಳಿವೆ. ಭಾರತಕ್ಕೆ ತಲೆನೋವಾಗಿರುವುದು 4ನೇ ಕ್ರಮಾಂಕ. ಕೊಹ್ಲಿ ನಾಯಕತ್ವದ ದಿನಗಳಲ್ಲೂ ಇದ್ದ ಈ ಸಮಸ್ಯೆ ಕೆಎಲ್ ರಾಹುಲ್ ಅವರ ಹಂಗಾಮಿ ಸಾರಥ್ಯದಲ್ಲೂ ಮುಂದುವರಿದಿದೆ. ಶ್ರೇಯಸ್ ಅಯ್ಯರ್ ಆಡಿದ ಎರಡೂ ಪಂದ್ಯಗಳಲ್ಲಿ ಕೈಕೊಟ್ಟಿ ದ್ದಾರೆ.

ನಂತರದ ಸ್ಥಾನದಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ. ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಎರಡು ಪಂದ್ಯವನ್ನಾಡಿದ ವೆಂಕಟೇಶ್ ಅಯ್ಯರ್ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ.

ಸ್ಪಿನ್ನರ್​ಗಳು ಕೂಡ ಈ ಪಿಚ್​ನಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ಆರ್. ಅಶ್ವಿನ್ ಜಾಗದಲ್ಲಿ ಆಲ್ರೌಂಡರ್ ಜಯಂತ್ ಯಾದವ್ ಅವರನ್ನು ನಿರೀಕ್ಷಿಸಲಾಗಿದೆ. ಶಾರ್ದೂಲ್ ಥಾಕೂರ್ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರೂ ಬ್ಯಾಟಿಂಗ್​ನಲ್ಲಿ ನೆರವು ನೀಡುತ್ತಿದ್ದಾರೆ. ಇವರ ಜಾಗಕ್ಕೆ ದೀಪಕ್ ಚಹರ್ ಅಥವಾ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತದ ಸಂಭಾವ್ಯ XI:

ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಜಯಂತ್ ಯಾದವ್, ಶಾರ್ದೂಲ್ ಥಾಕೂರ್, ಯುಜ್ವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.