Wednesday, 24th April 2024

ವಿಂಡೀಸ್‌ಗೆ ಆಘಾತ: ಡಕ್ವರ್ಥ್ ನಿಯಮ ದನ್ವಯ ಗೆದ್ದ ಧವನ್‌ ಪಡೆ

ಟ್ರಿನಿಡಾಡ್‌: ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು(ಡಕ್ವರ್ಥ್ ನಿಯಮ ದನ್ವಯ) 119 ರನ್‌ ಗಳಿಂದ ಸೋಲಿಸಿದ ಟೀಂ ಇಂಡಿಯಾ ಸರಣಿಯನ್ನು 3-0 ವೈಟ್‌ ವಾಶ್ ಮಾಡಿದೆ.

ಇದರೊಂದಿಗೆ ಶಿಖರ್ ಧವನ್ ನಾಯಕತ್ವದಲ್ಲಿ ಭಾರತದ 2 ನೇ ODI ಸರಣಿ ವಿಜಯ ದಾಖಲಿಸಿದೆ.

35 ಓವರ್‌ಗಳಲ್ಲಿ 257 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ 26 ಓವರ್‌ ಗಳಲ್ಲಿ 137 ರನ್‌ಗಳಿಗೆ ಆಲ್ ಔಟ್ ಸೋಲು ಕಂಡಿದೆ. ಯುಜು ವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರು. ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.

ಶಿಖರ್ ಧವನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಂತರ ಮಳೆಯಿಂದಾಗಿ ಎರಡು ಬಾರಿ ಪಂದ್ಯ ಸ್ಥಗಿತಗೊಂಡಿತ್ತು, ಶಿಖರ ಧವನ್ 58, ಶುಭಮನ್ ಗಿಲ್ 98, ಶ್ರೇಯಸ್ ಅಯ್ಯರ್ 44, ಸೂರ್ಯ ಕುಮಾರ್ ಯಾದವ್ 8, ಸಂಜು ಸ್ಯಾಮ್ಸನ್ 6 ರನ್ ಗಳಿಸಿದರು. ಭಾರತ 36 ಓವರ್ ಗಳಲ್ಲಿ 3 ವಿಕೆಟ್ ಗೆ 225 ರನ್ ಗಳಿಸಿತು.

ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 26 ಓವರ್ ಗಳಲ್ಲಿ 137 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. 

error: Content is protected !!