ಕ್ಯಾನ್ ಬೆರ್ರಾ: ಆಸ್ಟ್ರೇಲಿಯಾ ವಿರುದ್ದ ಶುಕ್ರವಾರ ನಡೆದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 11ರನ್ ಗಳಿಂದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 161ರನ್ ಗಳಿಸಿತು. ಕೆ.ಎಲ್ ರಾಹುಲ್ 51. ಹಾಗೂ ರವೀಂದ್ರ ಜಡೇಜಾ 44 ರನ್ ಗಳಿಸಿದರು. ಸಂಜು ಸ್ಯಾಮಸನ್ 23 ರನ್ ಗಳಿಸಿದ್ದನ್ನು ಹೊರತುಪಡಿಸಿ, ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಗಳಿಸಲು ವಿಫಲರಾದರು.
162 ರನ್ ಗಳ ಗುರಿಯನ್ನು ಬೆನ್ನಹತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿ 11 ರನ್ ಗಳಿಂದ ಸೋಲು ಅನುಭವಿಸಿತು. ಆರ್ಕಿ ಶಾರ್ಟ್ 34, ಆರೋನ್ ಪಿಂಚ್ 35. ಹಾಗೂ ಎಂ. ಹೆನ್ರಿಕ್ಯೂ 30 ರನ್ ಗಳಿಸಿದರು.
ಚಹಾಲ್ ಹಾಗೂ ನಟರಾಜನ್ ತಲಾ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ್ದ ಭಾರತ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ.