Friday, 13th December 2024

ಆಸೀಸ್‌ ದಾಳಿಗೆ ಟೀಂ ಇಂಡಿಯಾ ತತ್ತರ

ಸಿಡ್ನಿ:  ಮೊದಲ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 244ಕ್ಕೆ ರನ್ ಗಳಿಗೆ ಆಲೌಟ್ ಆಗಿದೆ. ಇತ್ತೀಚಿನ ವರದಿ ಪ್ರಕಾರ, ಆತಿಥೇಯರು ಎರಡು ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿತ್ತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಆಸೀಸ್ ಬೌಲರ್ ಗಳ ದಾಳಿಗೆ ತತ್ತರಿಸಿದ್ದು, 244 ರನ್‌ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಭಾರತ ತಂಡ 94 ರನ್ ಗಳ ತೀವ್ರ ಹಿನ್ನಡೆ ಅನುಭವಿಸಿದೆ.

ಓಪನರ್ ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಅರ್ಧಶತಕ ಬಾರಿಸಿರುವುದನ್ನು ಹೊರತುಪಡಿಸಿದರೆ ಭಾರತದ ಇತರೆ ಯಾವ ಬ್ಯಾಟ್ಸ್‌ಮನ್‌ನಿಂದ ಹೆಚ್ಚಿನ ರನ್ ಬರಲಿಲ್ಲ. 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 96 ರನ್ ಗಶಳಿಸಿದ್ದ ಭಾರತ ತಂಡ ಇಂದು 244ರನ್ ಗಳಿಗೆ ಆಲೌಟ್ ಆಗಿದೆ.

ಪೂಜಾರ ಅವರು ಅರ್ಧಶತಕ ಗಳಿಸಿ ಔಟಾದರೆ, ರಹಾನೆ 22 ರನ್ ಮಾತ್ರ ಗಳಿಸಿದರು. ಬಳಿಕ ಪಂತ್ 3 ರನ್ ಗಳಿಸಿ ಔಟ್ ಆದರು. 10 ರನ್ ಗಳಿಸಿ ಅಶ್ವಿನ್ ರನೌಟ್ ಗೆ ಬಲಿಯಾದರೆ, ಬುಮ್ರಾ ಕೂಡ ಶೂನ್ಯ ಸುತ್ತಿ ರನೌಟ್ ಆದರು. ಅಂತಿಮವಾಗಿ 6 ರನ್ ಗಳಿಸಿ ಸಿರಾಜ್ ಔಟ್ ಆದರು. 28ರನ್ ಗಳಿಸಿ ಆಸಿಸ್ ಬೌಲರ್ ಗಳಿಗೆ ಪ್ರತಿರೋಧ ಒಡ್ಡಿದ್ದ ರವೀಂದ್ರ ಜಡೇಜಾ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಕಬಳಿಸಿದರೆ, ಹೇಜಲ್ ವುಡ್ 2 ಮತ್ತು ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರು.