Thursday, 12th December 2024

ಚಾರ್ಟರ್‌ ಫ್ಲೈಟ್‌ನಲ್ಲಿ ಸ್ವದೇಶಕ್ಕೆ ಮರಳಲು ಟೀಂ ಇಂಡಿಯಾ ಸಜ್ಜು

ಬ್ರಿಡ್ಜ್ ಟೌನ್‌: ಚಂಡಮಾರುತದಿಂದ ವಿಮಾನ ಹಾರಟ ಸ್ಥಗಿತಗೊಂಡಿದ್ದರೂ, ಟಿ-20 ವಿಶ್ವಕಪ್‌ ವಿಜೇತ ಭಾರತೀಯ ಕ್ರಿಕೆಟ್‌ ತಂಡವು ಚಾರ್ಟರ್‌ ಫ್ಲೈಟ್‌ನಲ್ಲಿ ಸ್ವದೇಶಕ್ಕೆ ಹಾರಲು ಸಜ್ಜಾಗಿದೆ ಎಂದು ಬಾರ್ಬಡೋಸ್‌‍ ಪ್ರಧಾನಿ ಮಿಯಾ ಮೊಟ್ಲಿ ಹೇಳಿದರು.

ಚಂಡಮಾರುತದಿಂದ ಸುಮಾರು 12 ಗಂಟೆಗಳ ಕಾಲ ಸುರಕ್ಷತೆಗಾಗಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡ, ಅದರ ಸಹಾಯಕ ಸಿಬ್ಬಂದಿ, ಕೆಲವು ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರ ಕುಟುಂಬಗಳು ಕಳೆದ ಎರಡು ದಿನಗಳಿಂದ ಬೆರಿಲ್‌ ಚಂಡಮಾರುತದಿಂದಾಗಿ ಇಲ್ಲಿ ಸಿಲುಕಿಕೊಂಡಿದ್ದಾರೆ.

ಮಂಗಳವಾರ ಬ್ರಿಡ್ಜ್ ಟೌನ್‌ನಿಂದ ಸಂಜೆ 6 ಗಂಟೆಗೆ (ಸ್ಥಳೀಯ ಕಾಲಮಾನ) ಹೊರಟು ಬುಧವಾರ ರಾತ್ರಿ 7.45ಕ್ಕೆ (ಐಎಸ್‌‍ಟಿ) ದೆಹಲಿಗೆ ಇಳಿಯುವ ನಿರೀಕ್ಷೆಯಿದೆ. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಆಟಗಾರರನ್ನು ಸನಾನಿಸಲಿದ್ದಾರೆ ಆದರೆ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸ ಲಾಗಿಲ್ಲ.

ಮುಂದಿನ 12 ಗಂಟೆಗಳ ಒಳಗೆ ವಿಮಾನ ನಿಲ್ದಾಣ ತೆರೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಮಾರಣಾಂತಿಕ ಚಂಡಮಾರುತವು ಸೋಮವಾರ ಬಾರ್ಬಡೋಸ್‌‍ ಮತ್ತು ಹತ್ತಿರದ ದ್ವೀಪಗಳನ್ನು ಅಪ್ಪಳಿಸಿತು.