Thursday, 12th December 2024

ಟಿ20 ವಿಶ್ವಕಪ್ ಬೆನ್ನಲ್ಲೇ ಜಿಂಬಾಬ್ವೆ, ಶ್ರೀಲಂಕಾ ಪ್ರವಾಸ

ವದೆಹಲಿ :ಟಿ20 ವಿಶ್ವಕಪ್ ನಂತರವೂ ಟೀಮ್ ಇಂಡಿಯಾ ಜಿಂಬಾಬ್ವೆಯಲ್ಲಿ ಜುಲೈ 6 ರಿಂದ ಜುಲೈ 14 ರವರೆಗೆ 5 ಟಿ 20 ಪಂದ್ಯಗಳನ್ನು ಆಡಲಿದೆ. ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಏಕದಿನ ಹಾಗೂ ಟಿ20 ಸರಣಿ ಆಡಲಿದೆ.

ನಂತರ, ಭಾರತೀಯ ತಂಡದ ತವರು ಋತುವು ಪ್ರಾರಂಭವಾಗಲಿದೆ. ಇದು ಫೆಬ್ರವರಿಯವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿಗೆ ಆತಿಥ್ಯ ವಹಿಸಲಿದೆ. ಈ ತಂಡಗಳ ವಿರುದ್ಧ ಟೀಮ್ ಇಂಡಿಯಾ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಲ್ಲದೆ, 8 ಟಿ 20 ಪಂದ್ಯಗಳು ಮತ್ತು ನಂತರ 3 ಏಕದಿನ ಪಂದ್ಯಗಳನ್ನು ಆಡಲಿದೆ. ಇದು ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಸ್ವಲ್ಪ ಮೊದಲು ನಡೆಯಲಿದೆ.

ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾ 2 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.

ನಂತರ ನ್ಯೂಜಿಲೆಂಡ್ ತಂಡ ಭಾರತಕ್ಕೆ ಬರಲಿದ್ದು, ಉಭಯ ತಂಡಗಳ ನಡುವೆ 3 ಟೆಸ್ಟ್ ಪಂದ್ಯಗಳು ನಡೆಯಲಿವೆ. ನಂತರ ಜನವರಿಯಲ್ಲಿ ಇಂಗ್ಲೆಂಡ್ ತಂಡವು ಸೀಮಿತ ಓವರ್ಗಳ ಸರಣಿಗಾಗಿ ಭಾರತಕ್ಕೆ ಭೇಟಿ ನೀಡಲಿದೆ. ಉಭಯ ತಂಡಗಳ ನಡುವೆ 3 ವಾರಗಳ ಕಾಲ 5 ಟಿ20 ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳ ನಡುವೆ, ಟೀಮ್ ಇಂಡಿಯಾ ನವೆಂಬರ್-ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳ ಲಿದ್ದು, ಅಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಡಲಿದೆ. ಈ ಬಾರಿ ಟೆಸ್ಟ್ ಸರಣಿ 5 ಪಂದ್ಯಗಳನ್ನ ಒಳಗೊಂಡಿದೆ.