ಕೇಪ್ ಟೌನ್: ಬುಧವಾರದಿಂದ ಕೇಪ್ ಟೌನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲಿಸಿದೆ. ಆದರೆ, ಸರಣಿ ಸಮಬಲಗೊಳಿಸುವ ಉದ್ದೇಶದಿಂದ ಭಾರತ ತಂಡ ಕೇಪ್ ಟೌನ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾ ತಂಡವು ಸರಣಿಯನ್ನು ಗೆಲ್ಲಲು ಬಯಸುತ್ತದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆತಿಥೇಯರು ಪಂದ್ಯವನ್ನು ಗೆದ್ದಿದ್ದರು. ಈ ಜಯದಲ್ಲಿ ಆತಿಥೇಯ ತಂಡದ ಬೌಲರ್‌ಗಳ ಶ್ರಮ ಎದ್ದು ಕಾಣುತ್ತಿತ್ತು. ಅನುಭವಿ ಬೌಲರ್ ಕಗಿಸೋ ರಬಾಡ ತಮ್ಮ ಮಾರಕ ದಾಳಿಯಿಂದ ಎದುರಾಳಿಗಳನ್ನು ಕಟ್ಟಿ ಹಾಕಿದರೆ, ಪದಾರ್ಪಣೆ ಪಂದ್ಯವನ್ನು ಆಡಿದ್ದ ನಾಂದ್ರೆ ಬರ್ಗರ್ ಕರಾರುವಕ್ ದಾಳಿ ಸಂಘಟಿಸಿದ್ದು.
ಟೀಮ್ ಇಂಡಿಯಾ ಬ್ಯಾಟರ್‌ಗಳು ಎಡಗೈ ವೇಗದ ಬೌಲರ್ ವಿರುದ್ಧ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಇದೇ ಮೊದಲೇನಲ್ಲ. ನ್ಯೂಜಿಲೆಂಡ್ ತಂಡದ ಟೀಮ್ ಸೌಥಿ, ಆಸೀಸ್‌ನ ಮಿಚೆಲ್ ಸ್ಟಾರ್ಕ್, ಪಾಕಿಸ್ತಾನದ ಶಾಹಿನ್ ಶಾ ಆಫ್ರಿದಿ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದ್ದರು.