Saturday, 27th July 2024

ಸರಣಿ ಗೆಲ್ಲುವ ಉತ್ಸಾಹದಲ್ಲಿ ಭಾರತ ಯುವಪಡೆ

ರಾಯ್‌ಪುರ: ಭಾರತೀಯ ತಂಡವು ಶುಕ್ರವಾರ ನಡೆಯುವ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಬಗ್ಗುಬಡಿದು ಸರಣಿ ಗೆಲ್ಲುವ ಉತ್ಸಾಹದಲ್ಲಿದೆ.

3ನೇ ಪಂದ್ಯದಲ್ಲಿ ಭಾರತದ ಕಳಪೆ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯ ತಿರುಗೇಟು ನೀಡಲು ಸಾಧ್ಯವಾಗಿತ್ತು. ಗೆಲುವಿನ ಸವಾಲು (223 ರನ್‌) ಬಹಳಷ್ಟು ಕಠಿನವಾಗಿದ್ದರೂ ಅಂತಿಮ 2 ಓವರ್‌ಗಳಲ್ಲಿ ಆಸ್ಟ್ರೇಲಿಯ 40 ಪ್ಲಸ್‌ ರನ್‌ ಸಿಡಿಸಿ ಜಯಭೇರಿ ಬಾರಿಸಿತ್ತು. ಮ್ಯಾಕ್ಸ್‌ವೆಲ್‌ ಮತ್ತೂಮ್ಮೆ ಸಿಡಿದು ಭಾರತಕ್ಕೆ ಜಯ ನಿರಾಕರಿಸಿದ್ದರು. ಆಸ್ಟ್ರೇಲಿಯ ಸರಣಿ ಸಮಬಲಕ್ಕೆ ತರಲು ಪ್ರಯತ್ನಿಸುವ ಸಾಧ್ಯತೆಯಿದೆ.

ಕಳೆದ 3 ಪಂದ್ಯಗಳನ್ನು ಗಮನಿಸಿದರೆ ಭಾರತದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಯಶಸ್ವಿ ಜೈಸ್ವಾಲ್‌, ಇಶಾನ್‌ ಕಿಶನ್‌, ರಿಂಕು ಸಿಂಗ್‌, ನಾಯಕ ಸೂರ್ಯ ಕುಮಾರ್‌ ಯಾದವ್‌, ಋತುರಾಜ್‌ ಗಾಯಕ್ವಾಡ್‌ ಅಮೋಘ ಆಟದಿಂದಾಗಿ ಭಾರತದ ಮೊತ್ತ 200 ಪ್ಲಸ್‌ ದಾಟಲು ಸಾಧ್ಯ ವಾಗಿದೆ. ಕಳೆದ ಪಂದ್ಯದಲ್ಲಿ ಗಾಯಕ್ವಾಡ್‌ ಕೇವಲ 57 ಎಸೆತಗಳಲ್ಲಿ 123 ರನ್‌ ಸಿಡಿಸಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ಗಾಗಿ ಫಿಟ್‌ನೆಸ್‌ ಮತ್ತು ಕೆಲಸದ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮ್ಯಾಕ್ಸ್‌ವೆಲ್‌ ಸಹಿತ ಪ್ರಮುಖ ಆಟಗಾರ ರಿಗೆ ತವರಿಗೆ ಮರಳಲು ಸೂಚಿಸಲಾಗಿದೆ.

ಉಭಯ ತಂಡಗಳು
ಭಾರತ
ಸೂರ್ಯಕುಮಾರ್‌ ಯಾದವ್‌ (ನಾಯಕ), ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಜಿತೇಶ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಶಿವಂ ದುಬೆ, ರವಿ ಬಿಷ್ಣೋಯಿ, ಅರ್ಷದೀಪ್‌ ಸಿಂಗ್‌, ಪ್ರಸಿದ್ಧ್ ಕೃಷ್ಣ, ಆವೇಶ್‌ ಖಾನ್‌, ದೀಪಕ್‌ ಚಹರ್‌.

ಆಸ್ಟ್ರೇಲಿಯ
ಮ್ಯಾಥ್ಯೂ ವೇಡ್‌ (ನಾಯಕ), ಜೇಸನ್‌ ಬೆಹ್ರೆಂಡಾರ್ಫ್ , ಟಿಮ್‌ ಡೇವಿಡ್‌, ಬೆನ್‌ ಡ್ವಾರ್ಶಿಯಸ್‌, ನಥನ್‌ ಎಲ್ಲಿಸ್‌, ಕ್ರಿಸ್‌ ಗ್ರೀನ್‌, ಆರನ್‌ ಹಾರ್ಡಿ, ಟ್ರ್ಯಾವಿಸ್‌ ಹೆಡ್‌, ಬೆನ್‌ ಮೆಕ್‌ಡರ್ಮಟ್‌, ಜೋಶ್‌ ಫಿಲಿಪ್‌, ತನ್ವೀರ್‌ ಸಂಘಾ, ಮ್ಯಾಟ್‌ ಶಾರ್ಟ್‌, ಕೇನ್‌ ರಿಚರ್ಡ್‌ಸನ್‌.

Leave a Reply

Your email address will not be published. Required fields are marked *

error: Content is protected !!