ಚಿಕ್ಕಬಳ್ಳಾಪುರ: ಸತ್ಯ ಸಾಯಿ ಗ್ರಾಮದ ಸಾಯಿ ಕೃಷ್ಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಒಂದು ಜಗತ್ತು ಒಂದು ಕುಟುಂಬ ಒಂದು ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡವು ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಯುವರಾಜ್ ಸಿಂಗ್ ನಾಯಕತ್ವದ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದರೆ, ತೆಂಡೂಲ್ಕರ್ ತಂಡವು ಒಂದು ಎಸೆತ ಬಾಕಿ ಉಳಿದಿರುವಂತೆ ಗುರಿ ತಲುಪಿತು.
ಒನ್ ಫ್ಯಾಮಿಲಿ ತಂಡಕ್ಕೆ ಮ್ಯಾಡಿ, ಯುವರಾಜ್ ಮತ್ತು ಯೂಸುಫ್ ಪಠಾಣ್ ನೆರವು ನೀಡಿದರು. ಗುರಿ ಬೆನ್ನತ್ತಿದ ಒನ್ ವರ್ಲ್ಡ್ ತಂಡಕ್ಕೆ ಸಚಿನ್ ತಂಡೂಲ್ಕರ್, ಅಲ್ವಿರೋ ಪೀಟರ್ಸನ್ ನೆರವಾದರು. ಪೀಟರ್ಸನ್ ಅರ್ಧಶತಕ ಬಾರಿಸಿದರು.
ಕೊನೆಯಲ್ಲಿ ಸಹೋದರ ಯೂಸುಫ್ ಪಠಾಣ್ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಇರ್ಫಾನ್ ಪಠಾಣ್ ತಂಡಕ್ಕೆ ಗೆಲುವು ತಂದಿತ್ತರು.