Sunday, 15th December 2024

ಓವರ್​ನಲ್ಲಿ ಮೂರು ನೋಬಾಲ್​ ಎಸೆದ ಶೋಯೆಬ್​ ವ್ಯಾಪಕ ಟ್ರೋಲ್

ವದೆಹಲಿ: ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​ನಲ್ಲಿ ಫಾರ್ಚೂನ್ ಬಾರಿಶಲ್ ತಂಡದ ಪರ ಆಡುತ್ತಿರುವ ಶೋಯೆಬ್​ ಮಲಿಕ್​ ಒಂದೇ ಓವರ್​ನಲ್ಲಿ ಮೂರು ನೋಬಾಲ್​ ಎಸೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನೆಟ್ಟಿಗರು ಟೀಕಿಸಿದ್ದು, ಸನಾ ಜಾವೇದ್​ ಕಾಲ್ಗುಣ ಇರಬೇಕು ಎಂದು ವ್ಯಂಗ್ಯ ವಾಡಿದ್ದಾರೆ.

ಡೆತ್​ ಓವರ್​ನಲ್ಲಿ ಮಲಿಕ್​ ಅವರನ್ನು ಕಣಕ್ಕಿಳಿಸಿದ ನಾಯಕ ಮುಶ್ಫಿಕರ್​ ರಹಮಾನ್​ ಲೆಕ್ಕ ತಲೆ ಕೆಳಗಾಗಿದ್ದು, ಒಂದು ಓವರ್​ನಲ್ಲಿ ಮೂರು ನೋಬಾಲ್​ ಒಳಗೊಂಡಂತೆ 18ರನ್​ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತಾದರೂ 6 ಬಾಲ್​ಗಳನ್ನು ಎದುರಿಸಿ 5 ರನ್​ಗಳಿಸಲಷ್ಟೇ ಶೋಯೆಬ್​ ಮಲಿಕ್​ ಶಕ್ತರಾದರು.

ಒಂದೇ ಓವರ್​ನಲ್ಲಿ ಬೇಕಂತಲೇ ಮೂರು ನೋಬಾಲ್​ಗಳನ್ನು ಎಸೆದಿರುವುದನ್ನು ನೋಡಿದರೆ ಮ್ಯಾಚ್​ ಫಿಕ್ಸಿಂಗ್​ ಆದಂತೆ ಕಾಣುತ್ತಿದೆ. ಪಾಕಿಸ್ತಾನಿಗಳು ಮ್ಯಾಚ್​ ಫಿಕ್ಸಿಂಗ್​ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಹಲವರು ಕಮೆಂಟ್​ನಲ್ಲಿ ಶೋಯೆಬ್​ ಮಲಿಕ್​ರನ್ನು ದೂಷಿಸಿದ್ದಾರೆ.