ಶೆಫೀಲ್ಡ್ ಶೀಲ್ಡ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟ್ಯಾಸ್ಮೆನಿಯಾ ಪರ ಟಿಮ್ ಪೈನ್ 42 (62 ಎಸೆತ) ರನ್ ಗಳಿಸಿದರು. ಆದರೆ ಅವರು ಎರಡನೇ ಇನಿಂಗ್ಸ್‌ನಲ್ಲಿ 3 ರನ್‌ಗಳಿಗೆ ಅಜೇಯ ರಾಗಿದ್ದರು.
ಶೆಫೀಲ್ಡ್ ಶೀಲ್ಡ್‌ನಲ್ಲಿ 95 ಪಂದ್ಯಗಳ ನಂತರ ಟಿಮ್ ಪೈನ್ ಅವರ ಪ್ರಥಮ ದರ್ಜೆ ವೃತ್ತಿಜೀವನವು ಕೊನೆಗೊಳ್ಳುತ್ತದೆ. ಅವರು 2005 ರಲ್ಲಿ ದಕ್ಷಿಣ ಆಸ್ಟ್ರೇಲಿಯ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.ಟಿಮ್ ಪೈನ್, 2021 ರಲ್ಲಿ ಆಯಶಸ್ ಆರಂಭವಾಗುವ ಒಂದು ವಾರದ ಮೊದಲು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಪೈನ್ 2018 ರಿಂದ 2021 ರವರೆಗೆ 23 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸಿದ್ದರು. ಪೈನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4,000 ರನ್ ಗಳಿಸಿದ್ದಾರೆ.