Wednesday, 18th September 2024

US Open: ಯುಎಸ್‌ ಓಪನ್‌ ಮಿಶ್ರ ಡಬಲ್ಸ್‌; ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಬೋಪಣ್ಣ ಜೋಡಿ

US Open

ನ್ಯೂಯಾರ್ಕ್‌: ಪ್ರಸಕ್ತ ಸಾಗುತ್ತಿರುವ ಯುಎಸ್‌ ಓಪನ್(US Open) ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ(Rohan Bopanna) ಹಾಗೂ ಇಂಡೋನೇಷ್ಯಾದ ಅಲ್‌ದಿಲಾ ಸುಟ್‌ಜಿದಿ(Aldila Sutjiadi) ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ ನಡೆದ ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಬೋಪಣ್ಣ-ಸುಟ್‌ಜಿದಿ(Bopanna-Sutjiadi)  ಜೋಡಿ  ಆಸ್ಟ್ರೇಲಿಯಾದ ಜಾನ್ ಪಿಯರ್ಸ್ ಹಾಗೂ ಜೆಕ್ ಗಣರಾಜ್ಯದ ಕ್ಯಾತೆರಿನಾ ಸಿನಿಯಾಕೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ 0-6, 7-6(5), 10-7ರ ಅಂತರದಲ್ಲಿ ಗೆದ್ದು ಈ ಸಾಧನೆ ಮಾಡಿದರು.

ಮೊದಲ ಸೆಟ್‌ನಲ್ಲಿ ಸೋಲು ಕಂಡ 8ನೇ ಶ್ರೇಯಾಂಕದ ಬೋಪಣ್ಣ-ಸುಟ್‌ಜಿದಿ ಜೋಡಿ ಆ ಬಳಿಕದ 2 ಸೆಟ್‌ಗಳಲ್ಲಿ ಸತತವಾಗಿ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಸೆಪ್ಟೆಂಬರ್‌ 3ರಂದು ನಡೆಯುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 4ನೇ ಶ್ರೇಯಾಂಕದ ಬಾರ್ಬೊರಾ ಕ್ರೆಜಿಕೋವಾ ಮತ್ತು ಮ್ಯಾಥ್ಯೂ ಎಂಬ್ಡೆನ್‌ ಜೋಡಿಯ ಸವಾಲು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಜತೆಯಾಗಿ ಆಡುವ ಎಂಬ್ಡೆನ್‌ ಮತ್ತು ಬೋಪಣ್ಣ ಇದೀಗ ಪರಸ್ಪರ ಎದುರಾಳಿಯಾಗಿ ಆಡುತ್ತಿರುವುದು ಈ ಪಂದ್ಯದ ವಿಶೇಷತೆ. ಈ ಪಂದ್ಯಕ್ಕೂ ಮುನ್ನ ಸೋಮವಾರ ನಡೆಯುವ ಪುರುಷರ ಡಬಲ್ಸ್‌ನಲ್ಲಿ ಬೋಪಣ್ಣ ಮತ್ತು ಎಂಬ್ಡೆನ್‌ ಪ್ರೀ ಕ್ವಾರ್ಟರ್‌ ಪಂದ್ಯವನ್ನು ಆಡಲಿದ್ದಾರೆ. ಕಳೆದ ಬಾರಿಯ ಯುಎಸ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಈ ಬಾರಿ ಚಾಂಪಿಯನ್‌ ಆಗುವ ನಿರೀಕ್ಷೆಯನ್ನಿಟ್ಟುಕೊಂಡು ದಿಟ್ಟ ಹೋರಾಟ ಮುಂದುವರಿಸಿದ್ದಾರೆ.

https://x.com/iemjyo/status/1830173951911207338

16 ಸುತ್ತಿಗೇರಿದ ಸ್ವಿಯಾಟೆಕ್

ಭಾನುವಾರ ನಡೆದಿದ್ದಮಹಿಳಾ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್( Iga Swiatek)  25 ನೇ ಶ್ರೇಯಾಂಕದ ರಷ್ಯಾದ ಅನಾಸ್ತೆಸಿಯಾ ಪಾವ್ಲ್ಯುಚೆಂಕೋವಾ(Anastasia Pavlyuchenkova) ವಿರುದ್ಧ 6-4, 6-2 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಗೆ ಫೈನಲ್‌ ಪ್ರವೇಶಿಸಿದರು.  2022 ರಲ್ಲಿ ಸ್ವಿಯಾಟೆಕ್ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. 16ನೇ ಸುತ್ತಿನ ಪಂದ್ಯದಲ್ಲಿ ಸ್ವಿಯಾಟೆಕ್‌ ಅವರು 16 ನೇ ಶ್ರೇಯಾಂಕದ ಲಿಯುಡ್ಮಿಲಾ ಸ್ಯಾಮ್ಸೊನೊವಾ ಸವಾಲು ಎದುರಿಸಲಿದ್ದಾರೆ.

ಶನಿವಾರ ನಡೆದಿದ್ದ ಪುರುಷರ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅಲ್ಫಾನೊ ಒಲಿವೆಟ್ಟಿ ಜೋಡಿ ಗೆಲುವು ಸಾಧಿಸಿ 3ನೇ ಸುತ್ತಿಗೆ ಏರಿದ್ದಾರೆ. ಇಂಡೋ-ಫ್ರೆಂಚ್‌ ಜೋಡಿ ಸೇರಿಕೊಂಡು ಅಮೆರಿಕದ ಆಸ್ಟಿನ್‌ ಕ್ರಾಜಿಸೆಕ್‌-ನೆದರ್ಲೆಂಡ್ಸ್‌ನ ಜೀನ್‌ ಜೂಲಿಯನ್‌ ರೋಜರ್‌ ಅವರನ್ನು ತೀವ್ರ ಹೋರಾಟದ ಬಳಿಕ 4-6, 6-3, 7-5ರಿಂದ ಮಣಿಸಿದ್ದರು. ಆದರೆ, ಎನ್‌. ಶ್ರೀರಾಮ್‌ ಬಾಲಾಜಿ-ಗಿಡೊ ಆಯಂಡ್ರಿಯೋಝಿ (ಆರ್ಜೆಂಟೀನಾ) ಜೋಡಿ ನ್ಯೂಜಿಲ್ಯಾಂಡ್‌ನ‌ ಮೈಕಲ್‌ ವೀನಸ್‌-ಗ್ರೇಟ್‌ ಬ್ರಿಟನ್‌ನ ನೀಲ್‌ ಸ್ಕಪ್‌ಸ್ಕಿ ವಿರುದ್ಧ 6 (4)-7-, 4-6 ಅಂತರದಿಂದ ಪರಾಭವಗೊಂಡಿದ್ದರು.

Leave a Reply

Your email address will not be published. Required fields are marked *