ಕೋಲ್ಕತಾ:
ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆೆ 15 ಸದಸ್ಯೆೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂರ್ತಿ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಭಾರತ ವನಿತೆಯರು ಮೂರು ಏಕದಿನ ಪಂದ್ಯಗಳು ಹಾಗೂ ಹಲವು ಟಿ-20 ಪಂದ್ಯಗಳಲ್ಲಿ ಸೆಣಸಲಿದ್ದಾರೆ. ಆಫ್ ಸ್ಪಿಿನ್ನರ್ ಅನುಜಾ ಪಾಟೀಲ್ ಉಪನಾಯಕಿ ಜವಾಬ್ದಾಾರಿಯ ಹೊಣೆ ನೀಡಲಾಗಿದೆ. ಸುಷ್ಮಾಾ ವರ್ಮಾ ಹಾಗೂ ನುಝತ್ ಪರ್ವೀನ್ ಅವರು ಪಂದ್ಯದಲ್ಲಿ ವಿಕೆಟ್ ಕೀರ್ಪ ಜವಾಬ್ದಾಾರಿ ನಿರ್ವಹಿಸಲಿದ್ದಾರೆ.
ಭಾರತ ಎ ಮಹಿಳಾ ತಂಡ:
ವೇದಾ ಕೃಷ್ಣಮೂರ್ತಿ (ನಾಯಕಿ), ಅನುಜಾ ಪಾಟೀಲ್ (ಉಪ ನಾಯಕಿ), ಪ್ರಿಿಯಾ ಪೂನಿಯಾ, ಶಫಾಲಿ ವರ್ಮಾ, ಹರ್ಲೀನ್ ಡಿಯೊಲ್, ದೇವಿಕಾ ವೈದ್ಯ, ಡಿ.ಹೇಮಲತಾ, ತನುಶ್ರೀ ಸರ್ಕಾರ್, ಸುಷ್ಮಾಾ ವರ್ಮಾ(ವಿ.ಕೀ), ನುಝತ್ ಪರ್ವೀನ್ (ವಿ.ಕೀ), ಮಾನಸಿ ಜೋಷಿ, ಅರುಂಧತಿ ರೆಡ್ಡಿಿ, ರೇಣುಕಾ ಸಿಂಗ್, ಮನಾಲಿ ದಾಕ್ಷಿಣಿ, ಟಿ.ಪಿ ಕನ್ವರ್.