Thursday, 12th December 2024

ವೆಲಾಸಿಟಿ ತಂಡಕ್ಕೆ ಮಣಿದ ಸೂಪರ್ ನೋವಾಸ್

ಶಾರ್ಜಾ: ಭರವಸೆಯ ಆಟಗಾರ್ತಿ ಸುಷ್ಮಾ ವರ್ಮಾ (34), ಸೂನಿ ಲೂಸ್ (37) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವೆಲಾಸಿಟಿ ತಂಡ, ಸೂಪರ್ ನೋವಾಸ್ ತಂಡವನ್ನು ಮಹಿಳಾ ಟಿ-20 ಚಾಲೆಂಜ್ ಟೂರ್ನಿಯಲ್ಲಿ ಮಣಿಸಿತು.

ಟಾಸ್ ಸೋತರೂ ಬ್ಯಾಟ್ ಮಾಡಿದ ಸೂಪರ್ ನೋವಾಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 126 ರನ್ ಕಲೆ ಹಾಕಿತು. ಈ ಗುರಿ ಯನ್ನು ಬೆನ್ನಟ್ಟಿದ ವೆಲಾಸಿಟಿ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಮಿಥಾಲಿ ರಾಜ್ ಪಡೆ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.